ADVERTISEMENT

ಸಪ್ತಕ ಸಂಗೀತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST

ಸಪ್ತಕ: ಗುರುವಾರ ಬಾಲಚಂದ್ರ ನಾಯ್ಕನಕಟ್ಟೆ ಸ್ಮಾರಕ ಸಂಗೀತ ಕಛೇರಿ. ಅಂಧ ಕಲಾವಿದ ಹನುಮಂತಪ್ಪ ಕಾಮನಹಳ್ಳಿ ಅವರಿಂದ ವಯಲಿನ್. ಗುರುಸಂಗಪ್ಪ ಹೂಗಾರ (ತಬಲಾ). ಔರಂಗಾಬಾದ್‌ನ ನಾಥ್ ನೇರಳ್ಕರ್ ಅವರಿಂದ ಗಾಯನ, ರವೀಂದ್ರ ಯಾವಗಲ್ (ತಬಲಾ), ಡಾ. ರವೀಂದ್ರ ಕಾಟೋಟಿ (ಹಾರ್ಮೋನಿಯಂ).

ನಂತರ ಡಿ.ಕೆ. ಚೌಟ ಅವರಿಂದ ನೇರಳ್ಕರ್ ಅವರಿಗೆ ಸನ್ಮಾನ. ಪಂಡಿತ ಡಾ.ಪುಟ್ಟರಾಜ ಗವಾಯಿಗಳವರ ಪ್ರಮುಖ ಶಿಷ್ಯ ಹನುಮಂತಪ್ಪ ಬಸಪ್ಪ ತಿಮ್ಮಾಪೂರ ಹುಟ್ಟಿದ್ದು ಹಾವೇರಿ ಜಿಲ್ಲಾ ಶಿಗ್ಗಾಂವಿ ತಾಲ್ಲೂಕಿನ ಕಾಮನಹಳ್ಳಿಯಲ್ಲಿ. ಜನ್ಮತ ಅಂಧರಾಗಿದ್ದರೂ ಬಾಲ್ಯದಿಂದ ಅಂಟಿಕೊಂಡು ಬಂದ ಸಂಗೀತದ ಗೀಳು ಗದಗಿನ ವೀರೇಶ್ವರ ಪುಣ್ಯಾಶ್ರಮದ ಗವಾಯಿಗಳ ಮಡಿಲಲ್ಲಿ ಬೀಳುವಂತೆ ಮಾಡಿತು.

ಅಲ್ಪಾವಧಿಯಲ್ಲಿಯೇ ಸತತ ಪರಿಶ್ರಮದಿಂದ ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್ ಹಾಗೂ ಗಂಧರ್ವ ಮಹಾವಿದ್ಯಾಲಯದ ‘ಸಂಗೀತ ವಿಶಾರದ’ ಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿಕೊಂಡರು. ನಂತರ ಆಕಾಶವಾಣಿಯಲ್ಲಿ ‘ಬಿ ಹೈ’ ಗ್ರೇಡ್ ಕಲಾವಿದರೆಂದು ಮಾನ್ಯತೆ ಪಡೆದರು. ಸೋಲೋ ಕಾರ್ಯಕ್ರಮಗಳಲ್ಲದೇ ಸಹವಾದ್ಯಗಾರರಾಗಿ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ.
ಹಿಂದುಸ್ತಾನಿಯ ಖಯಾಲ್, ಠುಮ್ರಿ, ಭಜನ್‌ಗಳಿಗೆ ಹೆಸರಾದ ನೇರಳ್ಕರ್ ಅವರು ಗುರುಕುಲ ಮಾದರಿಯಲ್ಲಿ ಅನೇಕ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದವರು.ಸ್ಥಳ; ಕೆನರಾ ಯೂನಿಯನ್, 8 ನೇ ಮೇನ್, ಮಲ್ಲೇಶ್ವರ. ಬೆಳಿಗ್ಗೆ 10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.