ADVERTISEMENT

ಸಿಲಿಕಾನ್ ಸಿಟಿಯಲ್ಲಿ...

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಸಿಲಿಕಾನ್ ಸಿಟಿ ಜ್ಞಾನದ ತವರೂ ಹೌದು. ಇಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಶಿಕ್ಷಣ ಸಂಸ್ಥೆಗಳು, ಅವುಗಳಿಂದ ಹೊರಬಂದ ಪ್ರತಿಭಾವಂತರಿಂದ ಬೆಳೆದ ಐಟಿ ಬಿಟಿ ಕಂಪೆನಿಗಳಿವೆ. ಇಲ್ಲಿ ಶಿಕ್ಷಕರನ್ನು ಸ್ಮರಿಸುವ, ಆ ನೆಪದಲ್ಲಾದರೂ ಪರಂಪರೆಯತ್ತ ಬೆಳಕು ಚೆಲ್ಲುವ ಕಾರ್ಯಕ್ರಮಗಳು ನಡೆಯುತ್ತವೆ.

ಕೆಲವು ಸಂಸ್ಥೆಗಳು ಶಿಕ್ಷಕರಿಗಾಗಿ ಹಲವಾರು ಮನರಂಜನಾತ್ಮಕ ಕಾರ್ಯಕ್ರಮ, ಗುರುವಂದನೆ, ಸಣ್ಣಪುಟ್ಟ ಸ್ನೇಹಕೂಟ ಆಯೋಜಿಸಿವೆ. ಗುರುದಿನ ಎಂದರೆ ಕಡಿಮೆಯೇ? ಇಲ್ಲೂ ಶುಭ ಹಾರೈಕೆ, ಉಡುಗೊರೆಗಳ ವಿನಿಮಯವೂ ಇರುತ್ತದೆ. ಇದಕ್ಕಾಗಿಯೇ ಮಾರುಕಟ್ಟೆಯೂ ಸಜ್ಜಾಗಿದೆ. ಹಲವು ಬಗೆಯ  ಗ್ರಿಟಿಂಗ್ ಕಾರ್ಡ್, ಗಿಫ್ಟ್ ಐಟಂಗಳು ಕೂಡ ರಾರಾಜಿಸತೊಡಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.