ADVERTISEMENT

ಸಿಲ್ಕ್ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಸಿಲ್ಕ್ ಆಫ್ ಇಂಡಿಯಾ ಈಗ ಕೃಷ್ಣ ಖಾದಿ ಗ್ರಾಮೋದ್ಯೋಗ ಸಂಸ್ಥಾನದ ಸಹಯೋಗದಲ್ಲಿ ರೇಷ್ಮೆ ಮೇಳ ಆಯೋಜಿಸಿದೆ. ಮಧ್ಯಪ್ರದೇಶದ ಬಾಗ್ ಮತ್ತು ಮಹೇಶ್ವರಿ ಸೀರೆ, ರಾಜಸ್ತಾನದ ಬಂದೇಜ್ ಮತ್ತು ಕೈಮಗ್ಗದ ಸೀರೆ, ಕರ್ನಾಟಕದ ರೇಷ್ಮೆ ಮತ್ತು ಕೈಮಗ್ಗ ಸೀರೆ, ಡ್ರೆಸ್ ಮೆಟೀರಿಯಲ್‌ಗಳು, ಮಹಾರಾಷ್ಟ್ರದ ಕರಾವತಿ ಸೀರೆ, ಛತ್ತೀಸ್‌ಗಡದ ಕಾಂತಾ ಮತ್ತು ಬುಡಕಟ್ಟು ವಿನ್ಯಾಸಗಳಿರುವ ಸೀರೆ ಪ್ರದರ್ಶನದಲ್ಲಿದೆ. ಕಸೂತಿ ಸೀರೆ, ಲಖನೌ ಚಿಕನ್ ಸೀರೆ ಮತ್ತು ಕಾಶ್ಮೀರಿ ಪಾಷ್ಮೀನಾ ಶಾಲುಗಳು ಇಲ್ಲಿವೆ.

ದೇಶೀಯ ಸಂಸ್ಕೃತಿ ಉಳಿಸಿ, ಬೆಳೆಸುವುದು ಮತ್ತು ರೇಷ್ಮೆ, ಹತ್ತಿ ಹಾಗೂ ಕೈಮಗ್ಗದ ವಸ್ತುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಪ್ರದರ್ಶನದ ಉದ್ದೇಶ.  ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಬೆಳಿಗ್ಗೆ 11ರಿಂದ ರಾತ್ರಿ 9. ಪ್ರದರ್ಶನ ಮಾರ್ಚ್ 6ಕ್ಕೆ ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.