ADVERTISEMENT

ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST
ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ
ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ   

ಟಾಟಾ ಸಮೂಹದ ಸ್ಟಾರ್ ಬಜಾರ್ ಹಬ್ಬದ ಸಂಭ್ರಮ ಹೆಚ್ಚಿಸಲು ಹೊಸ ಬಣ್ಣ ಹಾಗೂ ಟ್ರೆಂಡ್‌ನ ಜವಳಿ ಉತ್ಪನ್ನ ಬಿಡುಗಡೆಗೊಳಿಸಿದೆ. ಅತ್ಯುತ್ತಮ ವಿನ್ಯಾಸ, ಶೈಲಿ, ಆಕರ್ಷಕ ದರ ಇದರ ವಿಶೇಷ.

ಇದರಲ್ಲಿ ಮಹಿಳೆಯರಿಗಾಗಿ 299-599ರೂ ದರ ಶ್ರೇಣಿಯಲ್ಲಿ ಕೆಂಪು ಹಾಗೂ ಚಿನ್ನದ ಬಣ್ಣಗಳ ಸಾಂಪ್ರದಾಯಿಕ ನವ್ಯ ಬ್ರಾಂಡ್ ಉಡುಗೆಗಳ ಸಂಗ್ರಹ, ಪುರುಷರಿಗೆ 199 ರಿಂದ 999 ರೂ ದರದಲ್ಲಿ ಸ್ಪೈಕ್ ಬ್ರ್ಯಾಂಡ್ ಕಾಟನ್ ಶರ್ಟ್‌ಗಳಿವೆ.

ಇದಲ್ಲದೆ 2-6 ವರ್ಷದ ಮಕ್ಕಳಿಗೆ ಟಾಮ್ಮಿ ಸಂಗ್ರಹ , 7-14 ವರ್ಷದ ಮಕ್ಕಳಿಗೆ ಸಾಸಿ ಮತ್ತು ಹುಡುಗರಿಗಾಗಿ ಕೊಲ್ಜ್ ಬ್ರಾಂಡ್ ಉಡುಪುಗಳು ಮನ ಸೆಳೆಯುತ್ತವೆ.

ಇದಲ್ಲದೆ ಗೃಹಾಲಂಕರಣದ ದಿಂಬಿನ ಕವರ್, ಬೆಡ್‌ಶಿಟ್, ಕರ್ಟನ್, ಮ್ಯೋಟ್‌ಗಳನ್ನು ಪರಿಚಯಿಸಿದೆ. ಇವುಗಳ ದರ 49ರೂ.ನಿಂದ ಆರಂಭವಾಗುತ್ತಿದ್ದು ಎಲ್ಲರ ಕೈಗೆಟಕುವಂತಿದೆ ಎನ್ನುತ್ತದೆ ಸ್ಟಾರ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.