ADVERTISEMENT

ಸ್ತನ್ಯಪಾನಕ್ಕೆ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಸ್ತನ್ಯಪಾನ ಸಪ್ತಾಹದ ಅಂಗವಾಗಿ ಸಮಾಜದಲ್ಲಿ ಸ್ತನ್ಯಪಾನ ಕುರಿತಂತೆ ಕೆಲವರಲ್ಲಿ ಇರಬಹುದಾದ ನಂಬಿಕೆ ಹಾಗೂ ಸಂದೇಹಗಳನ್ನು ಪರಿಹರಿಸಲು ಮಣಿಪಾಲ್ ಆಸ್ಪತ್ರೆ ಸಹಾಯವಾಣಿಗಳನ್ನು ತೆರೆದಿದೆ.

ಸ್ತನ್ಯಪಾನ ಅಂದರೆ ಏನು, ಹಾಲು ಕೊಡಲು ಸರಿಯಾದ ಸಮಯವೇನು? ಮಗುವಿಗೆ ಎಷ್ಟನೇ ವಯಸ್ಸಿನವರೆಗೆ ಹಾಲು ಕುಡಿಸಬೇಕು, ಆಹಾರ ತಿನಿಸಲು ಆರಂಭಿಸುವುದು ಯಾವಾಗ ಹಾಗೂ ಅದು ಹೇಗಿರಬೇಕು ಇತ್ಯಾದಿ ಪ್ರಶ್ನೆಗಳನ್ನು ವೈದ್ಯರಲ್ಲಿ ಕೇಳಿ ಉತ್ತರಪಡೆಯಬಹುದಾಗಿದೆ.

ಈ ಪ್ರಶ್ನೆಗಳಿಗೆ ಡಾ. ಜೋಶಿ ಅವರು ಉತ್ತರಿಸಲಿದ್ದಾರೆ. ಸಹಾಯವಾಣಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ತೆರೆದಿರುತ್ತದೆ. ಸಹಾಯವಾಣಿ ಸಂಖ್ಯೆ: 080- 2502 4444/2502 3344

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.