ಬಾಲಿವುಡ್‌ನ ನಟಿ ದಿಶಾ ಪಟಾನಿ ಮತ್ತು ನಟ ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರ ನಡುವೆ ‘ಕುಚ್‌ಕುಚ್’ ಇದೆ ಎನ್ನುವುದು ಬಾಲಿವುಡ್ ಗಲ್ಲಿಯ ಹಳೇ ಸುದ್ದಿ. ಆದರೆ ಇಬ್ಬರೂ ಒಟ್ಟಿಗೆ ಇರುವ ಒಂದೂ ಚಿತ್ರವನ್ನು ಯಾರೊಬ್ಬರೂ ಪೋಸ್ಟ್ ಮಾಡಿಲ್ಲ.
ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಸದಾ ಸುದ್ದಿ ಮಾಡು ದಿಶಾ ಈ ಬಾರಿ ಬಿಕನಿ ಚಿತ್ರಗಳು ಮತ್ತು ವಿಡಿಯೊ ತುಣುಕುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಚಿತ್ರಗಳನ್ನು ಪೋಸ್ಟ್ ಮಾಡುವ ವಿಚಾರದಲ್ಲಿ ದಿಶಾರನ್ನು ಅನುಸರಿಸುತ್ತಿರುವಂತೆ ಕಂಡುಬರುವ ಟೈಗರ್ ಶ್ರಾಫ್, ಹುರಿಗಟ್ಟಿದ ದೇಹವನ್ನು ಢಾಳಾಗಿ ಬಿಂಬಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
‘ಭಾಗಿ 2’ ಚಿತ್ರದಲ್ಲಿ ಈ ಜೋಡಿ ನಟಿಸಲಿದೆ ಎಂಬ ಮಾತುಗಳೂ ಇದೀಗ ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.