ADVERTISEMENT

ಉಲ್ಲಾಸ್ ಗೌಡರ ಹೊಸ ಸಿನಿ ಸಾಹಸ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಅಂಕಿತಾ ನಾಯ್ಡು
ಅಂಕಿತಾ ನಾಯ್ಡು   

ಚಿತ್ರ ನಿರ್ಮಾಪಕ ಬಾ.ಮ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಅವರು ವಿನೂತನ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ಸಿನಿಮಾ ನಟನೆ, ತಾಂತ್ರಿಕ ಕೆಲಸಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲು ನಾಲ್ಕು ವರ್ಷಗಳ ಹಿಂದೆ ‘ಉಲ್ಲಾಸ್ ಸ್ಕೂಲ್ ಸಿನಿಮಾಸ್’ ಆರಂಭಿಸಿದ್ದರು. ಈಗ ಅವರು ತಮ್ಮ ತರಬೇತಿ ಶಾಲೆಯ ಮಕ್ಕಳಿಂದ ಸಿನಿಮಾ ಮಾಡಿಸಲು ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣದ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಈ ಶಾಲೆಯಲ್ಲಿ ಮಕ್ಕಳಿಗೆ ಸಿನಿಮಾ ನಿರ್ದೇಶನ, ಎಡಿಟಿಂಗ್ ತರಬೇತಿ ನೀಡಲಾಗಿದೆ. ‘ಮಕ್ಕಳಲ್ಲಿನ ಪ್ರತಿಭೆ ಮರೆಯಾಗಬಾರದು ಎಂಬ ಉದ್ದೇಶದಿಂದ ಮಗ ತಾನೇ ಒಂದು ಸಿನಿಮಾ ಮಾಡಲು ಮುಂದಾಗಿದ್ದಾನೆ. ಈ ಸಿನಿಮಾದಲ್ಲಿರುವ ಮಕ್ಕಳೆಲ್ಲ ಉಲ್ಲಾಸ್ ಸ್ಕೂಲ್‌ ಸಿನಿಮಾಸ್‌ನಲ್ಲಿ ತರಬೇತಿ ಪಡೆದವರು’ ಎಂದರು ಹರೀಶ್.

ಸಿನಿಮಾದ ಎಡಿಟಿಂಗ್ ಹೊಣೆ ಒಂಬತ್ತನೆ ತರಗತಿಯ ಲೋಹಿತ್ ಚಂದನ್ ಅವರದ್ದು. ನಿರ್ದೇಶನ ಎಂಟನೇ ತರಗತಿಯ ಪಿ. ಲೋಹಿತ್ ಅವರದ್ದು. ಸಿನಿಮಾದ ಪೋಸ್ಟರ್‌ ವಿನ್ಯಾಸ ಎಂಟನೇ ತರಗತಿಯ ಅಂಕಿತಾ ನಾಯ್ಡು ಅವರದ್ದು. ಸಂಗೀತ ನೀಡುವುದು ಪ್ರಥಮ ಪಿಯು ವಿದ್ಯಾರ್ಥಿನಿ ವರ್ಣಶ್ರೀ ಅವರ ಕೆಲಸ. ಹಳ್ಳಿಗಳಲ್ಲಿನ ಸ್ವಚ್ಛತೆಯ ಬಗ್ಗೆ ಈ ಸಿನಿಮಾ ಹಾಸ್ಯಮಯವಾದ ಕಥೆಯೊಂದನ್ನು ಹೇಳಲಿದೆಯಂತೆ.

ADVERTISEMENT

ಸಿನಿಮಾದ ಕಥೆಯನ್ನು ವೆಂಕಟೇಶ್ ಪಂಚಾಂಗ್ ಅವರು ಸಿದ್ಧಪಡಿಸಿದ್ದಾರೆ. ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಸಿನಿಮಾದ ಚಿತ್ರೀಕರಣವು ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಚಿತ್ರೀಕರಣ ನಡೆಯಲಿದೆ. ಜುಲೈ ಕೊನೆಯ ವಾರದಲ್ಲಿ ಸಿನಿಮಾ ಪೂರ್ಣಗೊಳಿಸುವ ಗುರಿ ಉಲ್ಲಾಸ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.