ADVERTISEMENT

ಅಯ್ಯಪ್ಪ ಸ್ವಾಮಿಗೆ ಚಿನ್ನ ಲೇಪನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:00 IST
Last Updated 16 ಸೆಪ್ಟೆಂಬರ್ 2019, 20:00 IST
ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಚಿನ್ನಲೇಪನದ ಸೇವೆ ಸಮರ್ಪಿಸಿದರು
ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಚಿನ್ನಲೇಪನದ ಸೇವೆ ಸಮರ್ಪಿಸಿದರು   

ಹಲಸೂರಿನ ಉದ್ಯಮಿ ವಿನೀತ್‌ ಜೈನ್‌ ಅವರು ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ದ್ವಾರಪಾಲಕರು ಹಾಗೂ ಎರಡು ಗೋಡೆಗೆ ಚಿನ್ನಲೇಪನದ ಸೇವೆ ಸಮರ್ಪಿಸಿದ್ದಾರೆ.

ಚಿನ್ನದ ಲೇಪನವನ್ನುಅಯ್ಯಪ್ಪ ಸ್ವಾಮಿ ದೇವಾಲಯದ 50 ಚದರಡಿಯ ದ್ವಾರಪಾಲಕರು ಮತ್ತು ಗೋಡೆಗೆ ಓಣಂ ಹಬ್ಬದ ದಿನ ಅಳವಡಿಸಲಾಗಿದೆ.

ಹೈದರಾಬಾದ್‌ನಲ್ಲಿಮಾಡಿಸಿದ ಕಾಪರ್ ಪ್ಲೇಟ್‌ಗೆ ಚೆನ್ನೈನಲ್ಲಿ ಚಿನ್ನದ ಲೇಪನ ಮಾಡಿಸಲಾಗಿದೆ. ವಿಶೇಷವೆಂದರೆ, ಸಾಮಾನ್ಯವಾಗಿ ಚಿನ್ನದ ಲೇಪನವನ್ನು ಪಾದರಸದಲ್ಲಿ ಮಾಡಲಾಗುತ್ತದೆ. ಇದರಿಂದ ಲೋಹಕ್ಕೆ ಲೇಪಿಸಿದ ಚಿನ್ನ ಬೇರ್ಪಡಿಸುವುದು ಕಷ್ಟ. ಆದರೆ, ಈಗ ಚಿನ್ನವನ್ನು ಬೇರ್ಪಡಿಸಬಹುದಾದಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗಿದೆ.

ADVERTISEMENT

‘ದೇವಾಲಯದ ಆಡಳಿತ ಮಂಡಳಿ ಇದರಲ್ಲಿನ ಚಿನ್ನವನ್ನು ಬೇರ್ಪಡಿಸಿ ಬೇರೊಂದು ಕಾರ್ಯಕ್ಕೆ ಬಳಸುವ ಅವಕಾಶ ಕೂಡ ಇದೆ’ ಎಂದು ವಿನೀತ್‌ ಜೈನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.