ಇಂಡಿಯಾ ಯಮಹಾ ಮೋಟಾರ್ಸ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ‘ದಿ ಕಾಲ್ ಆಫ್ ದಿ ಬ್ಲೂ’ ಕಾರ್ಯಕ್ರಮ ಮಾರತ್ತಹಳ್ಳಿಯ ‘ಈಝೋನ್ ಕ್ಲಬ್’ನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಈ ಥ್ರಿಲ್ಲಿಂಗ್ ಚಾಪ್ಟರ್‌ನಲ್ಲಿ ‘ಜಿಮ್ಖಾನಾ ರೈಡಿಂಗ್’ ಸೇರಿದಂತೆ ಅತ್ಯಾಕರ್ಷಕವಾದ ಮತ್ತು ಸೊಗಸಾದ ರೀತಿಯಲ್ಲಿ ರೈಡರ್‌ಗಳು ಬೈಕ್ ಸವಾರಿ ಮಾಡಿ ನೆರೆದಿದ್ದವರನ್ನು ಮೈನವಿರೇಳಿಸುವಂತೆ ಮಾಡಿದರು. ಇದರಲ್ಲಿ ಪ್ರಮುಖವಾಗಿ ಅತಿ ಉದ್ದದ ‘ಯಮಹಾ ವಿಂಟೇಜ್ ಮೋಟರ್’ ಸೈಕಲ್‍ಗಳು ಎಲ್ಲರನ್ನು ಆಕರ್ಷಿಸಿದವು.
ಇದಲ್ಲದೇ, ಇತ್ತೀಚಿನ ದಿನಗಳಲ್ಲಿ ಯಮಹಾ ಬಿಡುಗಡೆ ಮಾಡಿರುವ ಎಲ್ಲಾ ದ್ವಿಚಕ್ರ ವಾಹನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಈ ವಾಹನಗಳ ಬಗ್ಗೆ ದ್ವಿಚಕ್ರವಾಹನ ಉತ್ಸಾಹಿಗಳಿಗೆ ಅಗತ್ಯ ಮಾಹಿತಿಗಳನ್ನೂ ನೀಡಲಾಯಿತು.
ಯಮಹಾದ ಗ್ಲೋಬಲ್ ಇಮೇಜ್ ಅನ್ನು ಗ್ರಾಹಕರಿಗೆ ತೋರಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ನಂತರ ಈ ‘ದಿ ಕಾಲ್ ಆಫ್ ದಿ ಬ್ಲೂ’ ಕಾರ್ಯಕ್ರಮ ದೆಹಲಿ- ಎನ್‍ಸಿಆರ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಚೆನ್ನೈ, ಕೋಲ್ಕತ್ತ ಮತ್ತು ಹೈದರಾಬಾದ್ ನಗರಗಳಲ್ಲಿ ಇದನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮೊತೊಫುನಿ ಶಿಟಾರ, ‘ದಿ ಕಾಲ್ ಆಫ್ ದಿ ಬ್ಲೂ’ನ ಆರಂಭದ ಮೂಲಕ ಯಮಹಾ ಗ್ರಾಹಕರು ಅಥವಾ ದ್ವಿಚಕ್ರ ವಾಹನಗಳ ಗ್ರಾಹಕರಿಗೆ ಸುಧಾರಿತವಾದ ತಂತ್ರಜ್ಞಾನವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ರೋಮಾಂಚಕಾರಿ ಸವಾರಿ ಸಂಸ್ಕೃತಿಯಿಂದಾಗಿ ‘ಯಮಹಾ’ಗೆ ಈ ನಗರ ಪ್ರಮುಖ ಮಾರುಕಟ್ಟೆ ಎನಿಸಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.