ADVERTISEMENT

ಸಂವಾದಾತ್ಮಕ ರಂಗಾನುಭವದ ‘ಬ್ಲ್ಯಾಕ್‌, ವೈಟ್‌ ಅಂಡ್‌ ಲೈಫ್‌ ಇನ್‌ ಬಿಟ್ವೀನ್‌’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
‘ಬ್ಲ್ಯಾಕ್‌, ವೈಟ್‌ ಅಂಡ್‌ ಲೈಫ್‌ ಇನ್‌ ಬಿಟ್ವೀನ್‌’
‘ಬ್ಲ್ಯಾಕ್‌, ವೈಟ್‌ ಅಂಡ್‌ ಲೈಫ್‌ ಇನ್‌ ಬಿಟ್ವೀನ್‌’   

‘ಡೈಮೆನ್ಜ್‌ನ್‌3’ ತಂಡ ಏಕತೆ ಮತ್ತು ಸರ್ವಜನ ಗೌರವ ಭಾವನೆಯ ಸಂಭ್ರಮಾಚರಣೆ ಉದ್ದೇಶದ ‘ಬ್ಲ್ಯಾಕ್‌, ವೈಟ್‌ ಅಂಡ್‌ ಲೈಫ್‌ ಇನ್‌ ಬಿಟ್ವೀನ್‌’ ರಂಗ ಪ್ರಯೋಗವನ್ನುಫೆ.27ರಂದು ಆಯೋಜಿಸಿದೆ.

‘ಬ್ಲ್ಯಾಕ್‌, ವೈಟ್‌ ಅಂಡ್‌ ಲೈಫ್‌ ಇನ್‌ ಬಿಟ್ವೀನ್‌’

ಕೆಲಸ ಮಾಡುವ ಸ್ಥಳದಲ್ಲಿ ವೈವಿಧ್ಯತೆ ಮತ್ತು ಎಲ್ಲರನ್ನು ಒಳಗೊಳ್ಳುವ ಮನೋಭಾವಕ್ಕೆ ಸಂಬಂಧಿಸಿದಂತೆ ಇರುವ ವಾಸ್ತವಾಂಶಗಳ ಸುತ್ತ ಸ್ವಾರಸ್ಯಕರ ಮತ್ತು ಅಷ್ಟೇ ಸೂಕ್ಷ್ಮ ಸಂವೇದನೆಗಳ ವಸ್ತುವನ್ನಿಟ್ಟುಕೊಂಡು ಸಂವಾದಾತ್ಮಕ ರಂಗಾನುಭವ ಕಟ್ಟಿಕೊಡುವುದು ಈ ಪ್ರಯೋಗದ ಹೈಲೈಟ್‌. ಒಬ್ಬ ತಂದೆ ಕಾರ್ಪೊರೇಟ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ತನ್ನ ಮಗಳು ಬರೆದ ಪತ್ರಗಳನ್ನು ಓದುವ ಮೂಲಕ ಅಲ್ಲಿನ ವಾಸ್ತವ ಲೋಕದ ದರ್ಶನ ಮಾಡಿಸುತ್ತಾರೆ. ಕಾರ್ಪೊರೇಟ್‌ ಸಂಸ್ಥೆಗಳಲ್ಲಿನ ಜಂಜಡಗಳು, ಲಿಂಗಪರಿವರ್ತಿತ ಉದ್ಯೋಗಿಯ ಮನಕರಗಿಸುವ ಸ್ವಗತ, ಅಂಗವಿಕಲರನ್ನು ಸಹೋದ್ಯೋಗಿಗಳು ನಡೆಸಿಕೊಳ್ಳುವ ಪರಿ, ಹೆರಿಗೆ ರಜೆ ಮುಗಿಸಿಬರುವ ಮಹಿಳೆಯರಿಗೆ ಕಚೇರಿಗಳು ಹೊಸ ಪ್ರಾಜೆಕ್ಟ್‌ ನೀಡಲು ಹಿಂಜರಿಯುವುದು.. ಇಂಥ ಐದು ಸನ್ನಿವೇಶಗಳನ್ನು ಪರಸ್ಪರ ಪೂರಕವೆಂಬಂತೆ ಹೆಣೆದು ರೂಪಿಸಿದ ಒಂದು ವಿಭಿನ್ನ ರಂಗಯತ್ನವಿದು.

ADVERTISEMENT

‘ಕಾರ್ಪೊರೇಟ್‌ ವಲಯದ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ರಂಗಸಾಹಸಕ್ಕೆ ಮುಂದಾಗಿದ್ದೇವೆ.ವೃತ್ತಿಪರ ರಂಗ ಕಲಾವಿದರು, ಸಿನಿಮಾ, ಟಿವಿ ಮತ್ತಿತರ ಮನರಂಜನಾ ಲೋಕದ ಕಲಾವಿದರು ಇದರಲ್ಲಿ ಅಭಿನಯಿಸಲಿದ್ದಾರೆ. ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಪರಸ್ಪರ ಸಂವಾದ ಇಲ್ಲಿನ ವಿಶೇಷ’ ಎನ್ನುತ್ತಾರೆ ನಾಟಕ ರಚಿಸಿ, ನಿರ್ಮಾಣದ ಹೊಣೆ ಹೊತ್ತ ಹೇಮಾ ಕುಲಕರ್ಣಿ.

ಸ್ಥಳ: ಅಲೈನ್ಸ್‌ ಪ್ರಾಂಚೈಸ್‌, ತಿಮ್ಮಯ್ಯ ರಸ್ತೆ, ಯುಎನ್‌ಐ ಎದುರಿಗೆ, ಲಾವೇರಪ್ಪ ಲೇಔಟ್‌, ವಸಂತನಗರ. ಫೆ.27, ಗುರುವಾರ, ಸಂಜೆ 6ರಿಂದ 7ರವರೆಗೆ. ಟಿಕೆಟ್‌–ಮೇರಾ ಈವೆಂಟ್ಸ್‌, ಈವೆಂಟ್ಸ್‌ ಹೈನಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.