ADVERTISEMENT

ಮಕ್ಕಳಿಂದ ಇಂಧನ ಸದ್ಬಳಕೆ, ಪರಿಸರ ಸಂರಕ್ಷಣೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 19:45 IST
Last Updated 9 ಡಿಸೆಂಬರ್ 2019, 19:45 IST
ನೆಲಮಂಗಲದ ಶಾಲಾ ಮಕ್ಕಳ ವಿಜ್ಞಾನ ಪ್ರದರ್ಶನ            ಚಿತ್ರ ೧: ರೋವರ್‌ನ್ನು ಆಂಡ್ರಾಯ್ಡ್ ಫೋನ್ ಮೂಲಕ ಚಲಿಸಿ ತೋರಿಸುತ್ತಿರುವ ಮಕ್ಕಳು. ಚಿತ್ರ ೨: ಭೂಕಂಪನ ಅಲಾರಾಂ ಪ್ರದರ್ಶನ. ಚಿತ್ರ ೩: ಮನೆಯ ಮೇಲೆ ಸೋಲಾರ್ ಅಳವಡಿಕೆ ಜಾಗೃತಿ. ಚಿತ್ರ ೪: ವಿಕಲಚೇತನರ ‘ಗೆಸ್ಚರ್ ಕಂಟ್ರೋಲರ್’ ಸಾಧನದ ಬಗ್ಗೆ ವಿವರಣೆ.
ನೆಲಮಂಗಲದ ಶಾಲಾ ಮಕ್ಕಳ ವಿಜ್ಞಾನ ಪ್ರದರ್ಶನ ಚಿತ್ರ ೧: ರೋವರ್‌ನ್ನು ಆಂಡ್ರಾಯ್ಡ್ ಫೋನ್ ಮೂಲಕ ಚಲಿಸಿ ತೋರಿಸುತ್ತಿರುವ ಮಕ್ಕಳು. ಚಿತ್ರ ೨: ಭೂಕಂಪನ ಅಲಾರಾಂ ಪ್ರದರ್ಶನ. ಚಿತ್ರ ೩: ಮನೆಯ ಮೇಲೆ ಸೋಲಾರ್ ಅಳವಡಿಕೆ ಜಾಗೃತಿ. ಚಿತ್ರ ೪: ವಿಕಲಚೇತನರ ‘ಗೆಸ್ಚರ್ ಕಂಟ್ರೋಲರ್’ ಸಾಧನದ ಬಗ್ಗೆ ವಿವರಣೆ.   

ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ನೋಡುತ್ತಿದ್ದ ಚಂದ್ರಯಾನದ ‘ರೋವರ್’, ಭೂಕಂಪನದ ಮುನ್ಸೂಚನೆ ಮತ್ತು ತೀರ್ವತೆಯನ್ನು ಅಳೆಯುವ ಮಾಪಕ ಮತ್ತು ಅಲಾರಾಂ, ವಿಕಲ ಚೇತನರಿಗೆ ಅನುಕೂಲಕರವಾಗಿರುವ ‘ಗೆಸ್ಚರ್ ಕಂಟ್ರೋಲ್’ ಸಾಧನ...

ಯಾವುದೋ ಮ್ಯೂಸಿಯಂನ ವಿವರಣೆ ಇದೆಯಲ್ಲ ಎಂದುಕೊಳ್ಳಬೇಡಿ. ಇದು ಮಕ್ಕಳು ತಮ್ಮ ಬುದ್ಧಿಮಟ್ಟ ಮೀರಿ ಪ್ರತಿಕೃತಿಗಳನ್ನು ತಯಾರಿಸಿ, ಅವುಗಳನ್ನು ತಮ್ಮ ಆಂಡ್ರಾಯ್ಡ್ ಫೋನ್‌ಗಳ ಮೂಲಕ ಚಲಾಯಿಸಿ ವಿವರಣೆ ಕೊಡುತ್ತಿದ್ದ ವಸ್ತು ಪ್ರದರ್ಶನದ ಝಲಕ್‌. ಮಕ್ಕಳು ವಿವರಿಸಿದ ವಿಜ್ಞಾನದ ಕೌತುಕ ಮತ್ತು ಕೊಡುಗೆಯನ್ನು ಕಣ್ತುಂಬಿಕೊಂಡ ಸಾರ್ವಜನಿಕರಲ್ಲಿ ಅಬ್ಬಾ ಎನ್ನುವ ಉದ್ಘಾರದ ಭಾವಾಭಿವ್ಯಕ್ತಿ ಕಂಡುಬಂದಿತು. ಮಕ್ಕಳಿಂದ ಇಷ್ಟೆಲ್ಲ ಸಾಧ್ಯವೇ ಎಂಬ ಹೊಗಳಿಕೆಯ ಮಹಾಪೂರ ಅವರಿಂದ ಹೊಮ್ಮಿತು. ಇವು ನೆಲಮಂಗಲ ಪಟ್ಟಣದ ‘ನ್ಯೂಸೆಂಚುರಿ ಶಾಲೆ’ಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಂಡ ಅಪರೂಪದ ದೃಶ್ಯಗಳು.

ಸೌರ ಶಕ್ತಿಯ ಸದ್ಬಳಕೆಗೆ ಮನೆಗಳ ಮೇಲೆ ಸೋಲಾರ್ ಅಳವಡಿಕೆ, ಅತ್ಯಮೂಲ್ಯ ನೀರನ್ನು ಉಳಿಸಲು ಮಳೆಕೊಯ್ಲು ಪದ್ಧತಿ, ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ಉಪಗ್ರಹಗಳು, ಸೌರವ್ಯೂಹ, ಗ್ರಹಣ ಕ್ರಿಯೆ, ಮನುಷ್ಯನ ಅಂಗಾಂಗಗಳು, ಅವುಗಳ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕೆ ಸಹಿತ ವಿದ್ಯಾರ್ಥಿಗಳು ವಿವರಿಸಿದರು.

ADVERTISEMENT

‘ವಿಜ್ಞಾನಕ್ಕೆ ಮಿತಿ ಎನ್ನುವುದಿಲ್ಲ, ಬೆಳೆಯುವ ಪೈರು ಮೊಳೆಕೆಯಲ್ಲಿ ಎಂಬಂತೆ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ನಶಿಸುತ್ತಿರುವ, ಪೋಲಾಗುತ್ತಿರುವ ಇಂಧನ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು, ಪ್ರೋತ್ಸಾಹಿಸಲು ಪ್ರದರ್ಶನ ಹಮ್ಮಿಕೊಳ್ಳಾಗಿದೆ’ ಎನ್ನುತ್ತಾರೆ ಶಾಲೆಯ ಕಾರ್ಯದರ್ಶಿ ಗಂಗಪ್ಪ.

- ಮಹಾಂತೇಶ್ ನೆಗಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.