ADVERTISEMENT

ಡಿಜೆ ದೆಬ್ಜೀತ್‌ ಜೊತೆ ‘ಹೌಸ್‌ ಆಫ್‌ ಟ್ರಾಯ್‌’ ಹೊಸ ವರ್ಷದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 19:30 IST
Last Updated 30 ಡಿಸೆಂಬರ್ 2019, 19:30 IST
ಡಿಜೆ ದೆಬ್ಜೀತ್‌
ಡಿಜೆ ದೆಬ್ಜೀತ್‌   

ಕೋರಮಂಗಲದ ‘ಹೌಸ್‌ ಆಫ್‌ ಟ್ರಾಯ್‌’ ರೆಸ್ಟೊರೆಂಟ್‌ ಹೊಸ ವರ್ಷವನ್ನು ಡಿಜೆ ದೆಬ್ಜೀತ್‌ ಬಾಜಿಯಾ ಜೊತೆ ಸ್ವಾಗತಿಸುತ್ತಿದೆ. ಡಿ.31 ರಾತ್ರಿ 8 ರಿಂದ ಹೌಸ್‌ ಆಫ್‌ ಟ್ರಾಯ್‌ನಲ್ಲಿ ಡಿಜೆ ನೈಟ್‌ ಆಯೋಜಿಸಲಾಗಿದೆ.

ಪ್ರಸಿದ್ಧ ಡಿಜೆ ಮತ್ತು ಎಲೆಕ್ಟ್ರಾನಿಕ್‌ ಸಂಗೀತ ಸಂಯೋಜಕಡಿಜೆ ದೆಬ್ಜೀತ್‌ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಸಂತೋಷದಿಂದ ನ್ಯೂ ಇಯರ್‌ ಅನ್ನು ಸಂಭ್ರಮಿಸಬಹುದು. ಇದರೊಂದಿಗೆ ಕಾಕ್‌ಟೇಲ್‌, ರುಚಿ–ರುಚಿಯಾದ ಖಾದ್ಯಗಳನ್ನೊಳಗೊಂಡ ಬಫೆ ಕೂಡ ಇರಲಿದೆ.ಗ್ರೀಕ್‌ ಆಹಾರ ಖಾದ್ಯಗಳು, ಹೌಸ್‌ ಆಫ್‌ ಟ್ರಾಯ್‌ನ ವಿಶೇಷತೆ. ಈ ಬಾರಿಯೂ ನ್ಯೂ ಇಯರ್‌ ವಿಶೇಷ ಖಾದ್ಯಗಳಲ್ಲಿ ಗ್ರೀಕ್‌ ಶೈಲಿಯ ಗ್ರಿಲ್ಡ್‌, ರೋಸ್ಟೆಡ್‌ ಚಿಕನ್‌, ಡೊಲ್ಮಾಡಾಕಿಯ ಸ್ಟಫಡ್‌ ವೈನ್‌ ಲೀವ್ಸ್‌ (Dolmadakia-stuffed vine leaves),ಚಿಕನ್‌ ಸೌವಲಾಕಿ– ಫ್ರೈಡ್‌ ಚೀಸ್‌(Chicken Souvlaki, Saganaki-Fried Cheese),ಗಿರೊಸ್‌–ಗ್ರಿಲ್ಡ್‌ ಮೀಟ್‌ ರೋಲ್ಸ್‌ (Gyros-grilled meat rolls), ರೇವಾನಿ(Revani) ಮತ್ತು ಕೊರ್ಮೊಸ್‌(Kormos), ಡೆರ್ಜರ್ಟ್‌ ಸೇರಿದಂತೆಗ್ರೀಸ್‌ ಶೈಲಿಯ ಕಾಕ್‌ಟೇಲ್‌ನ್ನು ಸಂಗೀತ ರಸಸಂಜೆಯಲ್ಲಿ ಮಗ್ನರಾಗಿ, ಸವಿಯಬಹುದು. ಪ್ರವೇಶ ಶುಲ್ಕ: ₹2000 ದಿಂದ ಆರಂಭ.

ಸ್ಥಳ– ಹೌಸ್‌ ಆಫ್‌ ಟ್ರಾಯ್‌, ಎಸ್‌ಜೆಆರ್‌ ಪ್ರಿಮಸ್‌, ಕೆಳ ಅಂತಸ್ತು, ಫಾರಂ ಮಾಲ್‌ ಮುಂಭಾಗ, 7ನೇ ಹಂತ ಕೋರಮಂಗಲ, 20ನೇ ಮುಖ್ಯರಸ್ತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.