ADVERTISEMENT

ಗರ್ಭಿಣಿಯರ ರ‍್ಯಾಂಪ್‌ ವಾಕ್‌ಮೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:00 IST
Last Updated 17 ಫೆಬ್ರುವರಿ 2019, 20:00 IST
ರ‍್ಯಾಂಪ್‌ ವಾಕ್‌
ರ‍್ಯಾಂಪ್‌ ವಾಕ್‌   

ಮಾರತ್ತಹಳ್ಳಿಯ ರೈನ್‌ ಬೋ ಮಕ್ಕಳ ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇತ್ತೀಚೆಗೆ ಇಲ್ಲಿ ಗರ್ಭಿಣಿಯರ ರ‍್ಯಾಂಪ್‌ ವಾಕ್‌ ಆಯೋಜಿಸಲಾಗಿತ್ತು.

ಪ್ರತಿದಿನಚಿಕಿತ್ಸೆಗಾಗಿ ಕಾಯುವ ಮಹಿಳೆಯರು ಅಂದು ಮಾತ್ರ ವಿಶೇಷವಾದ ಸಿದ್ಧತೆ ನಡೆಸಿದ್ದರು. ಸಾಂಪ್ರದಾಯಿಕ ಹಾಗೂ ಫ್ಯಾಷನ್‌ ಉಡುಗೆಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆಹಾಕಿದರು. ಅಷ್ಟೇ ಅಲ್ಲ ನೂರಾರು ಮಹಿಳೆಯರನ್ನು ಒಟ್ಟಿಗೆ ಸೇರಿಸಿ ಸೀಮಂತವನ್ನೂ ಮಾಡಲಾಯಿತು. ಅವರ ಜೊತೆ ಬಂದಿದ್ದ ಕುಟುಂಬ ಸದಸ್ಯರೂ ಸೇರಿ ಹಬ್ಬ ಆಚರಿಸಿದರು.

ಗರ್ಭಿಣಿಯರಿಗೋಸ್ಕರ ಈ ಸಂದರ್ಭದಲ್ಲಿ ವೈದ್ಯರೊಂದಿಗೆ ಸಂವಾದವನ್ನೂ ಏರ್ಪಡಿಸಲಾಯಿತು. ಮಗುವಿನ ಆರೈಕೆ, ಪೋಷಣೆ ಕುರಿತು ಆಸಕ್ತಿಕರ ವಿಷಯಗಳನ್ನು ವೈದ್ಯರು ಹಂಚಿಕೊಂಡರು. ಅಚ್ಚರಿಯ ಉಡುಗೊರೆ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಕೂಡ ಕಾರ್ಯಕ್ರಮದ ಆಕರ್ಷಣೆಯಾಗಿತ್ತು.

ADVERTISEMENT

ಹೆರಿಗೆ ಸಮಯದಲ್ಲಿ ಆತಂಕದಲ್ಲಿ ಇರುವ ತಾಯಂದಿರನ್ನು ಕರೆಸಿ ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಅವರಲ್ಲಿ ಗುಣಾತ್ಮಕ ಬದಲಾವಣೆಗಳು ಆಗುತ್ತವೆ. ಆಸ್ಪತ್ರೆಯ ವಾತಾವರಣದಲ್ಲಿ ಕೇಳಲಾಗದ ಪ್ರಶ್ನೆಗಳನ್ನು ಮುಕ್ತವಾಗಿ ಇಲ್ಲಿ ಅವರು ಕೇಳಿದರು. ಸ್ತ್ರೀರೋಗ ತಜ್ಞರಲ್ಲಿ ತಮ್ಮ ಸಣ್ಣ ಸಣ್ಣ ಸಮಸ್ಯೆಗಳನ್ನು ಹೇಳಿಕೊಂಡರು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ತನ್ಯಪಾನ ಮಾಡುವುದರ ಕುರಿತ ಸಮಾಲೋಚನೆ ಕೂಡ ಇತ್ತು. ಹೆರಿಗೆ ಸಮಯದ ಕಾಳಜಿಯನ್ನು ತಿಳಿಸಲಾಯಿತು. ಜೊತೆಗೆ ಅಪ್ಪ, ಅಮ್ಮ, ಮೊದಲನೇ ಮಗುವಿನೊಂದಿಗೆ ಪೋಟೊಗಳನ್ನೂ ತೆಗೆಯಲಾಯಿತು. ಕುಟುಂಬದೊಂದಿಗೆ ಕೆಲವು ಆಟಗಳನ್ನೂ ಆಡಿ ಮನರಂಜನೆ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.