ADVERTISEMENT

ರಾಷ್ಟ್ರೀಯ ಡಾನ್ಸ್‌ ಸ್ಪರ್ಧೆಗೆ ಬೆಂಗಳೂರಿನ ಇಬ್ಬರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:45 IST
Last Updated 1 ಏಪ್ರಿಲ್ 2019, 19:45 IST
ದಕ್ಷಿಣ ವಲಯದ ರೆಡ್‌ಬುಲ್ ಬಿಸಿ ಒನ್‌ ಸೈಫರ್‌ ಜೋನ್‌ನಲ್ಲಿ ಆಯ್ಕೆಯಾದ ಸ್ಪರ್ಧಿಗಳು
ದಕ್ಷಿಣ ವಲಯದ ರೆಡ್‌ಬುಲ್ ಬಿಸಿ ಒನ್‌ ಸೈಫರ್‌ ಜೋನ್‌ನಲ್ಲಿ ಆಯ್ಕೆಯಾದ ಸ್ಪರ್ಧಿಗಳು   

ಬೆಂಗಳೂರಿನ ಇಬ್ಬರು ಸ್ಪರ್ಧಿಗಳು ಸೇರಿದಂತೆದಕ್ಷಿಣ ವಲಯದ ರೆಡ್‌ಬುಲ್ ಬಿಸಿ ಒನ್‌ ಸೈಫರ್‌ ಜೋನ್‌ನ ಮೂವರು ಮುಂಬೈನಲ್ಲಿ ನಡೆಯಲಿರುವರಾಷ್ಟ್ರೀಯ ಬ್ರೇಕ್‌ ಡಾನ್ಸ್‌ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ದೇಶದ ಒಟ್ಟು ಒಂಬತ್ತು ವಲಯಗಳಲ್ಲಿ ಸ್ಪರ್ಧೆ ನಡೆದಿದ್ದು, ದಕ್ಷಿಣ ವಲಯದ ಸ್ಪರ್ಧೆ ಚೆನ್ನೈ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ನಡೆದಿವೆ. ಚೆನ್ನೈನ ಇಬ್ಬರು, ಹೈದರಾಬಾದ್‌ನ ಒಬ್ಬ ಮತ್ತು ಬೆಂಗಳೂರಿನ 13 ಡಾನ್ಸರ್‌ಗಳು ದಕ್ಷಿಣ ವಲಯಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಬೆಂಗಳೂರಿನ ಶಾನ್‌ ಮತ್ತು ಶೇನ್‌ ಸೇರಿದಂತೆ ದಕ್ಷಿಣ ವಲಯದಿಂದಮೂವರು ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.