ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 3-9-1995

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 20:15 IST
Last Updated 2 ಸೆಪ್ಟೆಂಬರ್ 2020, 20:15 IST
   

ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ

ಬೆಂಗಳೂರು, ಸೆ. 2– ಆಸ್ತಿ ನೋಂದಾವಣಿಗೆ ಸಮಯದಲ್ಲಿ ಅವುಗಳ ಮಾರುಕಟ್ಟೆ ಮೌಲ್ಯ ಹಾಗೂ ಅದಕ್ಕೆ ಪಾವತಿ ಮಾಡಬೇಕಾದ ಮುದ್ರಾಂಕ ಮತ್ತು ನೋಂದಾವಣೆ ಶುಲ್ಕ ಪ್ರಮಾಣದ ಬಗ್ಗೆ ನೋಂದಾವಣೆ ಪೂರ್ವದಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವ ಹೊಸ ಪದ್ಧತಿಯು ಈ ತಿಂಗಳ ಐದರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ.

ಉಪ ನೋಂದಾವಣಾಧಿಕಾರಿಗಳಿಂದ ಆಸ್ತಿ ನೋಂದಾವಣೆ ಸಂಬಂಧದಲ್ಲಿ ಸಾರ್ವಜನಿಕರಿಗೆ ಕಿರುಕುಳ ಆಗದಂತೆ ಮಾಡಲು ಈ ಪದ್ಧತಿ ಜಾರಿಗೆ ತರಲಾಗುವುದು. ಈ ಪದ್ಧತಿ ಅನುಷ್ಠಾನಕ್ಕೆ ಬರುತ್ತಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇದರಿಂದ ಅರ್ಧದಷ್ಟು ಭ್ರಷ್ಟಾಚಾರ ತಪ್ಪುತ್ತದೆ ಎಂದು ಕಂದಾಯ ಸಚಿವ ಆರ್‌.ಎಲ್‌. ಜಾಲಪ್ಪ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪಾಲಿಕೆ ಅಧಿಕಾರ ಪ್ರಶ್ನಿಸಿರುವ ಕೆಂಟಕಿ

ಬೆಂಗಳೂರು, ಸೆ.2 – ತಾನು ಮಾರುತ್ತಿರುವ ಕೋಳಿಮಾಂಸ ಪದಾರ್ಥಗಳ ಎಂಎಸ್‌ಜಿ (ಮೋನೋಸೋಡಿಯಂ ಗ್ಲುಟಮೆಟ್‌) ರಾಸಾಯನಿಕ ಪ್ರಮಾಣವನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅರ್ಹತೆಯನ್ನೇ ವಿವಾದಗ್ರಸ್ತ ಕೆಎಫ್‌ಸಿ (ಕೆಂಟಕಿ ಫ್ರೈಡ್‌ ಚಿಕನ್‌) ಪ್ರಶ್ನಿಸಿದೆ.

ಇದರಿಂದ ವಿವಾದಕ್ಕೆ ಈಗ ಹೊಸ ತಿರುವು ಬಂದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.