ದನದ ಮಾಂಸ ತಿಂದ ಆರೋಪದ ಮೇಲೆ 1.38 ಲಕ್ಷ ಉದ್ಯೋಗಿಗಳನ್ನು ಅಮೂಲ್ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ರಮ ತೆಗೆದುಕೊಂಡ ಗುಜರಾತ್‌ನ ಅತಿದೊಡ್ಡ ಡೇರಿ ಸಹಕಾರ ಸಂಸ್ಥೆಯ ಮುಖ್ಯಸ್ಥ ಆನಂದ್ ಸೇಥ್ ಅವರನ್ನು ಹಲವಾರು ಟ್ವಿಟರ್ ಹಾಗೂ ಫೇಸ್‌ಬುಕ್ ಬಳಕೆದಾರರು ಶ್ಲಾಘಿಸಿದ್ದಾರೆ.
ಉದ್ಯೋಗಿಗಳ ವಜಾ ವಿಚಾರವನ್ನು ಪರಿಶೀಲಿಸಿದ ಲಾಜಿಕಲ್ ಫ್ಯಾಕ್ಟ್ ಚೆಕ್ ವೆಬ್‌ಸೈಟ್, ಇದು ಸುಳ್ಳು ಎಂದು ತಿಳಿಸಿದೆ. ದೇಶದ ಅತಿದೊಡ್ಡ ಡೇರಿ ಎಂಬ ಖ್ಯಾತಿ ಪಡೆದಿರುವ ಅಮೂಲ್ ಒಂದು ವೇಳೆ ಇಂತಹ ಕ್ರಮ ತೆಗೆದುಕೊಂಡಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು. ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಸುದ್ದಿಗಳು ಲಭ್ಯವಾಗಿಲ್ಲ. ಅಮೂಲ್‌ಗೆ ಮುಖ್ಯಸ್ಥರು ಇಲ್ಲ. ಗುಜರಾತ್ ಸಹಕಾರ ಹಾಲು ಒಕ್ಕೂಟವು ಸಂಸ್ಥೆಯನ್ನು ಮುನ್ನಡೆಸುತ್ತಿದೆ ಎಂಬ ಮಾಹಿತಿ ಅಮೂಲ್ ವೆಬ್‌ಸೈಟ್‌ನಲ್ಲಿದೆ. ಸಂಸ್ಥೆಯಲ್ಲಿ 1.38 ಲಕ್ಷ ಉದ್ಯೋಗಿಗಳೇ ಇಲ್ಲ ಎಂದು ಸಂಸ್ಥೆಯ ಎಂ.ಡಿ. ಆರ್.ಎಸ್ ಸೋಧಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.