ADVERTISEMENT

ಪ್ಲೇಸ್ಟೋರ್‌ನಿಂದ ಚೀನಾ ಆ್ಯಪ್‌ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2020, 6:17 IST
Last Updated 21 ಜೂನ್ 2020, 6:17 IST
   

ನವದೆಹಲಿ:ಚೀನಾ ನಿರ್ಮಿತ ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ, ಈ ಸುದ್ದಿ ಸುಳ್ಳು ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಸದ್ಯ ಭಾರತದಲ್ಲಿ ಬಳಕೆಯಲ್ಲಿರುವ 13 ಅಪ್ಲಿಕೇಷನ್‌ಗಳನ್ನು, ಪ್ಲೇಸ್ಟೋರ್‌ನಿಂದ ನಿರ್ಬಂಧಿಸಲುಮಾಹಿತಿ ತಂತ್ರಜ್ಞಾನ ಇಲಾಖೆ ಆದೇಶಿಸಿದೆ ಎಂಬ ವಿವರವನ್ನೊಳಗೊಂಡ ಪ್ರಕಟಣೆಯೊಂದು ಹರಿದಾಡುತ್ತಿದೆ. ಮಾತ್ರವಲ್ಲದೆ, ಈ ಆ್ಯಪ್‌ಗಳ ಬಗ್ಗೆ ದೇಶದ ನಾಗರೀಕರಲ್ಲಿರುವ ಮಾಹಿತಿ ಗೌಪ್ಯತೆಯ ಬಗೆಗಿನ ಕಳವಳವನ್ನು ಕೊನೆಗಾಣಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮರ್ಥನೆಯನ್ನೂ ನೀಡಲಾಗಿದೆ.

ಲೈವ್‌ಮಿ, ಬಿಗೊ ಲೈವ್‌, ವಿಗೊ ವಿಡಿಯೊ, ಬ್ಯೂಟಿ ಪ್ಲಸ್‌, ಕ್ಯಾಮ್‌ಸ್ಕ್ಯಾನರ್‌, ಕ್ಲಾಶ್‌ ಆಫ್‌ ಕಿಂಗ್ಸ್‌, ಮೊಬೈಲ್‌ ಲೆಜೆಂಡ್ಸ್‌, ಕ್ಲಬ್‌ಫ್ಯಾಕ್ಟರಿ, ರೊಮ್‌ವೇ, ಆ್ಯಪ್‌ಲಾಕ್‌, ಶೀನ್‌, ವಿಮೇಟ್‌ ಮತ್ತು ಗೇಮ್‌ ಆಫ್‌ ಸುಲ್ತಾನ್‌ ಆ್ಯಪ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ADVERTISEMENT

ಈ ಸಂಬಂಧ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಪಿಐಬಿ, ‘ಆ್ಯಪ್‌ ಸ್ಟೋರ್‌ನಲ್ಲಿ ಕೆಲವು ಅಪ್ಲಿಕೇಷನ್‌ಗಳನ್ನು ತೆಗೆದುಹಾಕುವಂತೆ ಸರ್ಕಾರ ಆದೇಶಿಸಿದೆ ಎಂಬ ಸುದ್ದಿ ವೈರಲ್‌ ಆಗಿದೆ. ಈ ಆದೇಶ ಸುಳ್ಳು. ಅಂತಹ ಯಾವುದೇ ಸೂಚನೆಯನ್ನು ಸರ್ಕಾರ ನೀಡಿಲ್ಲ’ ಎಂದು ತಿಳಿಸಿದೆ.

ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳು ಸಂಘರ್ಷ ನಡೆಸಿದ ಬಳಿಕ, ಚೀನಾ ಸರಕುಗಳನ್ನು ನಿಷೇಧಿಸಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.