ADVERTISEMENT

Factcheck ಕೋವಿಡ್ ಲಸಿಕೆ ಹಾಕಿಸಿಕೊಂಡ ನರ್ಸ್ ಕೆಲವೇ ನಿಮಿಷಗಳಲ್ಲಿ ಮೃತಪಟ್ಟರೇ?

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 19:30 IST
Last Updated 22 ಡಿಸೆಂಬರ್ 2020, 19:30 IST
   

ಅಮೆರಿಕದಲ್ಲಿ ಫೈಝರ್ ಕೋವಿಡ್ ಲಸಿಕೆ ಹಾಕಿಸಿಕೊಂಡ ನರ್ಸ್ ಕೆಲವೇ ನಿಮಿಷಗಳಲ್ಲಿ ಕುಸಿದು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ಕುಸಿದು ಬೀಳುತ್ತಿರುವ ದೃಶ್ಯ ಎಂದು ಹೇಳಲಾದ ವಿಡಿಯೊ ಕೂಡ ವೈರಲ್ ಆಗಿದೆ.

ಈ ಬಗ್ಗೆ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಪರಿಶೀಲನೆ ನಡೆಸಿದಾಗ, ನರ್ಸ್ ಮೃತಪಟ್ಟಿಲ್ಲ ಎಂಬುದು ಖಚಿತಪಟ್ಟಿದೆ. ಡೈಲಿಮೇಲ್ ವರದಿ ಪ್ರಕಾರ, ಚುಚ್ಚುಮದ್ದು ಪಡೆದ ನರ್ಸ್ ಟಿಫಾನಿ ಪಂಟೀಸ್ ಡೋವರ್ ಅವರಿಗೆ ಮೂರ್ಚೆ ಕಾಯಿಲೆಯಿದೆ.

ಲಸಿಕೆ ಪಡೆದ ಬಳಿಕ 17 ನಿಮಿಷಗಳವರೆಗೆ ಅವರಿಗೆ ಪ್ರಜ್ಞೆ ಇರಲಿಲ್ಲ. ಇದು ಲಸಿಕೆಯಿಂದ ಆದ ಸಮಸ್ಯೆ ಅಲ್ಲ. ಅವರು ಆಗಾಗ್ಗೆ ಮೂರ್ಚೆ ಹೋಗುತ್ತಾರೆ ಎಂದು ವರದಿಯಾಗಿದೆ. ತಮಗೆ ಲಸಿಕೆಯಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಟಿಫಾನಿ ಅವರೇ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.