ADVERTISEMENT

Fact Check: ಬಿಹಾರದ ಹತ್ಯೆಗೂ ‘ಲವ್ ಜಿಹಾದ್’ಗೂ ನಂಟಿಲ್ಲ

ಫ್ಯಾಕ್ಟ್ ಚೆಕ್
Published 8 ಮೇ 2023, 19:31 IST
Last Updated 8 ಮೇ 2023, 19:31 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಆರೋಪಿ ಒಪ್ಪಿಕೊಂಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಸ್ಲಾಂ ಧರ್ಮದ ಮೇಲಿನ ಗೌರವಕ್ಕಾಗಿ ತಾನು ಹೀಗೆ ಮಾಡಿದೆ ಎಂದು ಆರೋಪಿ ವಿಡಿಯೊದಲ್ಲಿ ಹೇಳುತ್ತಾನೆ. ‘ತನ್ನ ಹೆಂಡತಿ ಹಿಂದೂ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆ’ ಎಂಬ ಬರಹವು ವಿಡಿಯೊದ ಕೆಳಭಾಗದಲ್ಲಿ ಕಾಣಿಸುತ್ತದೆ. ವಿಡಿಯೊದ ಕೊನೆಯಲ್ಲಿ ಹಲವು ಹೆಣ್ಣುಮಕ್ಕಳ ಚಿತ್ರಗಳು ಕಾಣುತ್ತವೆ. ಇವರೆಲ್ಲಾ ‘ಲವ್ ಜಿಹಾದ್’ನ ಸಂತ್ರಸ್ತರು ಎಂದು ಹೇಳುತ್ತಾ ವಿಡಿಯೊ ಕೊನೆಗೊಳ್ಳುತ್ತದೆ. ‘ಹೆಂಡತಿ ಹಿಂದೂ ಎಂಬ ಕಾರಣಕ್ಕೆ ಕೊಲೆ ಮಾಡಿದೆ ಎಂದು ಆರೋಪಿಯು ಎಷ್ಟು ಹೆಮ್ಮೆಯಿಂದ ಹೇಳುತ್ತಿದ್ದಾನೆ. ಈ ವಿಡಿಯೊ ನೋಡಿ ಎಲ್ಲರೊಂದಿಗೆ ಹಂಚಿಕೊಳ್ಳಿ’ ಎಂದು ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಬರೆದಿದ್ದಾರೆ. ಹಲವರು ವಿಡಿಯೊ ಹಂಚಿಕೊಂಡಿದ್ದಾರೆ. ಆದರೆ ಇದು ಸುಳ್ಳು.

ಬಿಹಾರದ ಸಮಸ್ತಿಪುರ ಜಿಲ್ಲೆಯ ಮೆಹಬೂಬ್ ಎಂಬಾತ ವರ್ಷದ ಹಿಂದೆ ಮದುವೆಯಾಗಿದ್ದ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಆರೋಪಿಯ ಪತ್ನಿ ಹಿಂದೂ ಧರ್ಮಕ್ಕೆ ಸೇರಿದವಳು ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ‘ದಿ ಕ್ವಿಂಟ್’, ಹಾಗೂ ‘ಇಂಡಿಯಾಟುಡೇ’ ಫ್ಯಾಕ್ಟ್ ಚೆಕ್ ಪ್ರಕಟಿಸಿವೆ. ಇಬ್ಬರೂ ಇಸ್ಲಾಂ ಧರ್ಮಕ್ಕೆ ಸೇರಿದವರು. ‘ಮಾನಸಿಕ ಅಸ್ವಸ್ಥನಾಗಿದ್ದ ಮೆಹಬೂಬ್, ಪತ್ನಿ ಯಾಸ್ಮೀನ್‌  ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರಕರಣದ ತನಿಖಾಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT