ADVERTISEMENT

Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

ಫ್ಯಾಕ್ಟ್ ಚೆಕ್
Published 18 ಡಿಸೆಂಬರ್ 2025, 0:30 IST
Last Updated 18 ಡಿಸೆಂಬರ್ 2025, 0:30 IST
,,,
,,,   

ಬೃಹತ್ ಜನಸಮೂಹವು ರಾತ್ರಿ ವೇಳೆ ಒಂದೆಡೆ ನೆರೆದು ಜೋರಾಗಿ ಕೂಗುತ್ತಾ, ಮೊಬೈಲ್ ಫ್ಲಾಷ್‌ಲೈಟ್‌ಗಳನ್ನು ತೋರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫುಟ್‌ಬಾಲ್ ಲೋಕದ ದಂತಕಥೆ ಲಿಯೊನೆಲ್ ಮೆಸ್ಸಿ ಅವರು ಇತ್ತೀಚೆಗೆ ‘GOAT tour of India’ ಪ್ರವಾಸದ ಭಾಗವಾಗಿ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಅವರನ್ನು ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು.

ಇನ್‌ವಿಡ್ ಸಾಧನದ ಮೂಲಕ ವಿಡಿಯೊದ ಕೀಫ್ರೇಮ್‌ಗಳನ್ನು ವಿಂಗಡಿಸಿ, ಒಂದು ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ವಿಶ್ಲೇಷಣೆಗೊಳಪಡಿಸಿದಾಗ, ಈ ವಿಡಿಯೊನ ಹಲವರು ಹಂಚಿಕೊಂಡಿರುವುದು ಕಂಡಿತು. ಮತ್ತಷ್ಟು ಹುಡುಕಾಟ ನಡೆಸಿದಾಗ, ‘ಎಕ್ಸ್’ ಬಳಕೆದಾರರೊಬ್ಬರು ‘ಮರೆಯಲು ಸಾಧ್ಯವಾಗುತ್ತಲೇ ಇಲ್ಲ #ಪುಷ್ಪ–2’ ಎಂದು ವಿಡಿಯೊದೊಂದಿಗೆ ಪೋಸ್ಟ್ ಮಾಡಿದ್ದರು. ಅದರ ಆಧಾರದಲ್ಲಿ ನಿರ್ದಿಷ್ಟ ಪದದ ಮೂಲಕ ಗೂಗಲ್‌ನಲ್ಲಿ ಹುಡುಕಿದಾಗ, ‘ನ್ಯೂಸ್ ಬಜ್’ 2024ರ ಡಿ.5ರಂದು ಯೂಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವುದು ಕಂಡಿತು. ‘ಪುಷ್ಪ–2’ ಚಿತ್ರ ಪ್ರದರ್ಶನವಾಗುತ್ತಿದ್ದ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದಾಗ ಅವರನ್ನು ನೋಡಲು ಸೇರಿದ್ದ ಜನಸಮೂಹದ ಬಗ್ಗೆ ವರದಿ ಉಲ್ಲೇಖಿಸಿತ್ತು. ಹಳೆಯ ವಿಡಿಯೊ ಅನ್ನು ಮೆಸ್ಸಿ ಭೇಟಿ ಸಂದರ್ಭದ್ದು ಎಂದು ಹಂಚಿಕೊಳ್ಳುವ ಮೂಲಕ ತಪ್ಪು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT