ADVERTISEMENT

ಫ್ಯಾಕ್ಟ್ ಚೆಕ್ | ಸ್ಮೃತಿ ಮಂದಾನ ಪಾದ ಸ್ಪರ್ಶಿಸಿದ ಫಾತಿಮಾ ಸನಾ: ಸುದ್ದಿ ಸುಳ್ಳು

ಫ್ಯಾಕ್ಟ್ ಚೆಕ್
Published 13 ಅಕ್ಟೋಬರ್ 2025, 0:06 IST
Last Updated 13 ಅಕ್ಟೋಬರ್ 2025, 0:06 IST
   

ಐಸಿಸಿ ಮಹಿಳಾ ವಿಶ್ವಕಪ್‌ಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಸಿಸಿ ಮಹಿಳಾ ವಿಶ್ವಕಪ್‌ನ 2025 ಅ.5ರ ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಫಾತಿಮಾ ಸನಾ ಅವರು ಭಾರತ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಅವರ ಮುಂದೆ ಮೊಣಕಾಲೂರಿ ಅವರ ಪಾದ ಸ್ಪರ್ಶಿಸಿದರು ಎಂದು ಚಿತ್ರವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

2025ರ ಅ.5ರಂದು ಭಾರತ–ಪಾಕಿಸ್ತಾನದ ನಡುವೆ ನಡೆದ ಪಂದ್ಯದ ನೇರ ಪ್ರಸಾರವಾಗಿದ್ದ ದೃಶ್ಯಾವಳಿಯನ್ನು ಪರಿಶೀಲನೆ ಮಾಡಿದಾಗ, ಫಾತಿಮಾ ಸನಾ ಅವರು ಸ್ಮೃತಿ ಮಂದಾನ ಅವರ ಪಾದ ಮುಟ್ಟಿದ ಘಟನೆ ನಡೆದಿರುವುದು ಕಾಣಲಿಲ್ಲ.

ಪಂದ್ಯದ ಟಾಸ್ ಹಾಕಿದಾಗ ಭಾರತದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕಿಸ್ತಾನದ ಕ್ಯಾಪ್ಟನ್ ಫಾತಿಮಾ ಸನಾ ಪರಸ್ಪರ ಕೈಕುಲಕಲಿಲ್ಲ. ನಂತರವೂ ಎರಡೂ ತಂಡಗಳ ಆಟಗಾರ್ತಿಯರ ನಡುವೆ ಹಸ್ತಲಾಘವ ನಡೆಯಲಿಲ್ಲ. ಚಿತ್ರವನ್ನು ಕೃತಕ ಬುದ್ಧಿಮತ್ತೆ ಪತ್ತೆ ಸಾಧನಗಳಾದ ಎಐ ಆರ್ ನಾಟ್, ಸೈಟ್‌ಎಂಜಿನ್ ಮತ್ತು ಅನ್‌ಡಿಟೆಕ್ಟಬಲ್ ಎಐ ಮೂಲಕ ಪರಿಶೀಲನೆ ಮಾಡಿದಾಗ, ಅದು ಎಐ ನಿರ್ಮಿತ ಇರಬಹುದು ಎನ್ನುವುದರ ಕುರುಹುಗಳು ಸಿಕ್ಕವು. ಎಐ ನಿರ್ಮಿತ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.