fact check
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾರತ ನ್ಯಾಯಯಾತ್ರೆಯನ್ನು ಭಾರತ ಆಕ್ರಮಿತ ಅರುಣಾಚಲ ಪ್ರದೇಶದಿಂದ ಆರಂಭಿಸದೆ ಮಣಿಪುರದಿಂದ ಆರಂಭಿಸಿದ್ದಾರೆ. ಚೀನಾದ ಸಾರ್ವಭೌಮತ್ವವನ್ನು ಗೌರವಿಸಿದ್ದಕ್ಕಾಗಿ ರಾಹುಲ್ ಅವರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ಧನ್ಯವಾದ ಅರ್ಪಿಸಿದ್ದಾರೆ’ ಎಂದು ಗ್ಲೋಬಲ್ ಟೈಮ್ಸ್ ಸುದ್ದಿ ಸಂಸ್ಥೆಯು ತನ್ನ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ನ್ಯಾಯಯಾತ್ರೆಯ ಮಾರ್ಗವನ್ನು ಸಾರ್ವಜನಿಕಗೊಳಿಸಿದ ದಿನವೇ ನಾನು ಹೇಳಿದ್ದೆ. ಅರುಣಾಚಲ ಪ್ರದೇಶವನ್ನು ಕೈಬಿಡಲಾಗಿದೆ ಎಂದು. ಕಾಂಗ್ರೆಸ್ ಅಂದರೆ, ಚೀನಾದ ಫ್ರಾಂಚೈಸಿ’ ಎಂದು ಹಲವರು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
‘ಗ್ಲೋಬಲ್ ಟೈಮ್ಸ್’ ಸುದ್ದಿ ಸಂಸ್ಥೆಯ ಸಾಮಾಜಿಕ ಜಾಲತಾಣಗಳನ್ನು ಹುಡುಕಲಾಯಿತು. ರಾಹುಲ್ ಗಾಂಧಿಯ ಬಗ್ಗೆ ಅಥವಾ ಭಾರತ ನ್ಯಾಯಯಾತ್ರೆಯ ಕುರಿತು ನಿರ್ದಿಷ್ಟವಾಗಿ ಹುಡುಕಲಾಯಿತು. ಕೆಲವು ವರದಿಗಳು ಕಂಡವು. ಆದರೆ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯಾವುದೇ ವರದಿಯೂ ದೊರೆಯಲಿಲ್ಲ. ಈ ಕುರಿತು ಭಾರತೀಯ ಮಾಧ್ಯಮ ಮಾಡಿದ ಯಾವ ವರದಿಯೂ ದೊರೆಯಲಿಲ್ಲ. ಸುದ್ದಿ ಸಂಸ್ಥೆ ಮಾಡಿದೆ ಎನ್ನಲಾದ ಪೋಸ್ಟ್ ಅನ್ನು ಗಮನಿಸಿದಾಗ ಅದೊಂದು ಎಡಿಟ್ ಮಾಡಲಾದ ಚಿತ್ರ ಎಂದು ತಿಳಿದುಬಂದಿತು. ಹುಡುಗಿಯೊಬ್ಬರು ನಗುತ್ತಿರುವ ಚಿತ್ರವೊಂದು ಪೋಸ್ಟ್‌ನಲ್ಲಿದೆ. ಆದ್ದರಿಂದ, ರಾಹುಲ್ ಗಾಂಧಿ ಅವರಿಗೆ ಚೀನಾ ಅಧ್ಯಕ್ಷ ಅಭಿನಂದನೆ ತಿಳಿಸಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ‘ಇಂಡಿಯಾ ಟುಡೆ’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.