ADVERTISEMENT

Fact Check: ಮಹಿಳಾ ಸಮೃದ್ಧಿ ಅಡಿ ವಿಧವೆಯರ ಬ್ಯಾಂಕ್ ಖಾತೆಗೆ ₹5 ಲಕ್ಷ ಪಾವತಿ!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 19:31 IST
Last Updated 10 ಡಿಸೆಂಬರ್ 2020, 19:31 IST
ಫ್ಯಾಕ್ಟ್‌ ಚೆಕ್
ಫ್ಯಾಕ್ಟ್‌ ಚೆಕ್   

ವಿಧವೆಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ‘ಮಹಿಳಾ ಸಮೃದ್ಧಿ’ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಇದರನ್ವಯ ದೇಶದ ಎಲ್ಲ ವಿಧವೆಯರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರವು ₹5 ಲಕ್ಷ ಪಾವತಿ ಮಾಡಲಿದೆ. ಜತೆಗೆ ವಿಧವೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನೂ ಪೂರೈಸಲಿದೆ. ನೊಂದ ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬುವುದು ಸರ್ಕಾರದ ಉದ್ದೇಶ ಎಂದು ಯುಟ್ಯೂಬ್ ವಿಡಿಯೊವೊಂದರಲ್ಲಿ ಹೇಳಲಾಗಿದೆ.

ಇಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ದಾರಿ ತಪ್ಪಿಸುವ ಇಂತಹ ವಿಡಿಯೊಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT