ADVERTISEMENT

Fact Check: ಇದು ಬಾಲಿವುಡ್‌ ನಟಿ ಕಾಜೋಲ್‌ ಅವರ ಡೀಪ್‌ಫೇಕ್‌ ವಿಡಿಯೊ

Fact Check

ಫ್ಯಾಕ್ಟ್ ಚೆಕ್
Published 16 ನವೆಂಬರ್ 2023, 18:45 IST
Last Updated 16 ನವೆಂಬರ್ 2023, 18:45 IST
fact check
fact check   

ಬಾಲಿವುಡ್‌ ನಟಿ ಕಾಜೋಲ್‌ ದೇವಗನ್‌ ಅವರು ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ವಿಡಿಯೊವೊಂದು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ‘ಎಕ್ಸ್‌’ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿದೆ. ಅಶ್ಲೀಲ ಪದಗಳಿಂದ ಈ ವಿಡಿಯೊಗೆ ಕ್ಯಾಪ್ಷನ್‌ ನೀಡಲಾಗುತ್ತಿದೆ. ಇದಕ್ಕೆ ಅಶ್ಲೀಲವಾದ ಕಾಮೆಂಟ್‌ಗಳನ್ನು ಜನರು ಮಾಡುತ್ತಿದ್ದಾರೆ. ಆದರೆ, ಇದು ಡೀಪ್‌ಫೇಕ್‌ ವಿಡಿಯೊ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ಆತಂಕ ಸೃಷ್ಟಿಸಿತ್ತು. ಕೇಂದ್ರ ಸರ್ಕಾರವು ಈ ಬಗ್ಗೆ ಕ್ರಮ ತೆಗೆದುಕೊಂಡಿದೆ. ಇವುಗಳ ಬೆನ್ನಲ್ಲೇ ನಟಿಯರಾದ ಕಿಯಾರ ಅಡ್ವಾನಿ, ದೀಪಿಕಾ ಪಡುಕೋಣೆ, ಆಲಿಯಾ ಭಟ್‌ ಸೇರಿದಂತೆ ಹಲವು ನಟಿಯ ಡೀಪ್‌ಫೇಕ್‌ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಗೆಟ್‌ ರೆಡಿ ವಿತ್‌ ಮಿ’ ಎನ್ನುವ ಟಿಕ್‌ಟಾಕ್‌ನ ಟ್ರೆಂಡ್‌ಗಾಗಿ ಇಂಗ್ಲಿಷ್‌ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ರೋಸಿ ಬ್ರಿನ್‌ ಅವರ ವಿಡಿಯೊಗೆ ಕಾಜೋಲ್‌ ಅವರ ಮುಖವನ್ನು ಡೀಪ್‌ಫೇಕ್‌ ಮಾಡಲಾಗಿದೆ. ಇದು ತಮ್ಮದೇ ವಿಡಿಯೊ ಎಂದು ರೋಸಿ ಅವರು ಖಚಿತಪಡಿಸಿದ್ದಾರೆ ಎಂದು ‘ದಿ ಕ್ವಿಂಟ್‌’ ಹಾಗೂ ‘ಬೂಮ್‌ಲೈವ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT