ADVERTISEMENT

ಫ್ಯಾಕ್ಟ್‌ಚೆಕ್‌: ಮನಮೋಹನ್ ಬದಲಿಗೆ ಸೋನಿಯಾ ಬಾಂಗ್ಲಾ ಪ್ರಧಾನಿ ಜತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 17:42 IST
Last Updated 30 ಮಾರ್ಚ್ 2021, 17:42 IST
ಪೋಸ್ಟ್‌ಕಾರ್ಡ್ ಕನ್ನಡ ಹಂಚಿಕೊಂಡಿರುವ ಪೋಸ್ಟರ್
ಪೋಸ್ಟ್‌ಕಾರ್ಡ್ ಕನ್ನಡ ಹಂಚಿಕೊಂಡಿರುವ ಪೋಸ್ಟರ್   

ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಆಗ ಮನಮೋಹನ್ ಬದಲಿಗೆ, ಕಾಂಗ್ರೆಸ್‌ನ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಬಾಂಗ್ಲಾ ಪ್ರಧಾನಿ ಜತೆ ಮಾತುಕತೆ ನಡೆಸಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕಡೆಗಣಿಸಲಾಗಿತ್ತು. ಆದರೆ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಮೋದಿ ಅವರು ಬಾಂಗ್ಲಾ ಪ್ರವಾಸದಲ್ಲಿ, ಅಲ್ಲಿನ ಪ್ರಧಾನಿ ಷೇಕ್ ಹಸೀನಾ ಜತೆ ನೇರ ಮಾತುಕತೆ ನಡೆಸಿದ್ದಾರೆ ಎಂಬ ವಿವರಗಳಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರ ಜತೆ ಚಿತ್ರಗಳು ಸಹ ವೈರಲ್ ಆಗಿವೆ. ಕನ್ನಡದಲ್ಲಿ, ಪೋಸ್ಟ್‌ಕಾರ್ಡ್‌ ಕನ್ನಡ ತನ್ನ ಫೇಸ್‌ಬುಕ್‌ ಪುಟದಲ್ಲಿ ಈ ಪೋಸ್ಟ್‌ ಹಂಚಿಕೊಂಡಿದೆ.

ಇದು ಸುಳ್ಳು ಸುದ್ದಿ ಎಂದು ಹಲವು ಫ್ಯಾಕ್ಟ್‌ಚೆಕ್ ವೇದಿಕೆಗಳು ಹೇಳಿವೆ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ಷೇಕ್ ಹಸೀನಾ ಅವರು ಜತೆ ಇರುವ ಚಿತ್ರವು, ಯುಪಿಎ ಅವಧಿಯದ್ದು ಅಲ್ಲ. ಬಾಂಗ್ಲಾ ಪ್ರವಾಸದ ವೇಳೆ ತೆಗೆದ ಚಿತ್ರವೂ ಅಲ್ಲ. 2019ರ ಅಕ್ಟೋಬರ್ 6ರಂದು ಷೇಕ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಕಾಂಗ್ರೆಸ್‌ ನಾಯಕರ ಜತೆಯೂ ಮಾತುಕತೆ ನಡೆಸಿದ್ದರು. ಆಗ ತೆಗೆಯಲಾಗಿದ್ದ ಚಿತ್ರವನ್ನು ಈಗ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT