Factcheck
ಬೀದಿ ನಾಯಿಗಳನ್ನು ಜನವಸತಿ ಪ್ರದೇಶಗಳಿಂದ ತೊಲಗಿಸಿ, ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಈ ದಿಸೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೊ ಹರಿದಾಡುತ್ತಿದೆ. ಮರುಭೂಮಿಯಂತೆ ಕಾಣುವ ನಿರ್ಬಂಧಿತ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ನಾಯಿಗಳು ಒಂದೆಡೆ ಓಡಾಡುತ್ತಿರುವುದು ವಿಡಿಯೊದಲ್ಲಿದೆ. ನ್ಯಾಯಾಲಯದ ಆದೇಶದಂತೆ ಸರ್ಕಾರವು ಬೀದಿನಾಯಿಗಳಿಗಾಗಿ ಆಶ್ರಯ ತಾಣವನ್ನು ರೂಪಿಸಿದೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಇದೇ ವಿಡಿಯೊ ‘ಗಿವ್‌ಮಿಯುವರ್‌ವಾಯ್ಸ್’ ಎನ್ನುವ ಪ್ರಾಣಿಹಕ್ಕುಗಳ ಚಾನೆಲ್‌ನಲ್ಲಿ 2025ರ ಮಾರ್ಚ್ 10ರಂದು ಅಪ್‌ಲೋಡ್ ಆಗಿರುವುದು ಕಂಡಿತು. ಇರಾಕ್‌ನ ಎರ್ಬಿಲ್‌ನಲ್ಲಿ ಸುಮಾರು 3 ಸಾವಿರ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಯಿತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ಭಾರತದಲ್ಲಿ ಬೀದಿ ನಾಯಿಗಳಿಗಾಗಿ ಆಶ್ರಯ ತಾಣವನ್ನು ರೂಪಿಸಿರುವ ಬಗ್ಗೆ ಯಾವುದೇ ವರದಿ ಕಾಣಲಿಲ್ಲ. ಇರಾಕ್‌ನ ವಿಡಿಯೊ ಅನ್ನು ಹಂಚಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.