ADVERTISEMENT

ಸೂರ್ಯಕುಮಾರ್ ಕೈ ಕುಲುಕಲು ಮುಂದಾಗ ಅಲಿ ‌ಅಘಾ ನಿರಾಕರಿಸಿದರು ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
..
..   

ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ‌ಅಘಾ ಅವರತ್ತ ಕೈ ಚಾಚಿರುವಂತೆ ಕಾಣುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೆಬ್ರುವರಿ 15ರಂದು ಎರಡು ತಂಡಗಳ ನಡುವಿನ ಪಂದ್ಯದ ವೇಳೆ ಸಲ್ಮಾನ್ ಅವರ ಕೈ ಕುಲುಕಲು ಸೂರ್ಯಕುಮಾರ್ ಅವರು ಮುಂದಾದರೂ, ಸಲ್ಮಾನ್ ಅವರು ನಿರಾಕರಿಸಿದರು ಎಂದು ಚಿತ್ರವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಚಿತ್ರವನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ ಇದೇ ಚಿತ್ರವನ್ನು ಹಲವರು ಇಂಥದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು. ಮುಂದುವರಿದು, ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರ ಮೇಲೆ ಜೆಮಿನಿ ವಾಟರ್ ಮಾರ್ಕ್ ಇರುವುದು ಕಂಡಿತು. ಚಿತ್ರವು ಕೃತಕ ಬುದ್ಧಿಮತ್ತೆ (ಎಐ) ನಿರ್ಮಿತ ಎನ್ನುವ ಸೂಚನೆಗಳು ಸಿಕ್ಕವು. ಚಿತ್ರವನ್ನು ಹೈವ್ ಮಾಡರೇಷನ್ ಎನ್ನುವ ಎಐ ಪತ್ತೆ ಸಾಧನದ ಮೂಲಕ ‍ಪರೀಕ್ಷಿಸಿದಾಗ, ಇದು ಎಐ ನಿರ್ಮಿತ ಡೀಪ್‌ಫೇಕ್ ಚಿತ್ರವಾಗಿರುವ ಸಾಧ್ಯತೆ ಶೇ 99.9ರಷ್ಟು ಎನ್ನುವುದು ತಿಳಿಯಿತು. ಈ ಬಗ್ಗೆ ಗೂಗಲ್ ಸರ್ಚ್‌ನಲ್ಲಿ ಹುಡುಕಾಟ ನಡೆಸಿದಾಗ, 2025ರಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ನಂತರ ಎರಡೂ ತಂಡಗಳ ನಡುವೆ ಕೈ ಕುಲುಕುವ ಪರಿಪಾಟ ನಿಂತಿದೆ ಎನ್ನುವ ಮಾಹಿತಿ ಸಿಕ್ಕಿತು. ಎಐ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT