ADVERTISEMENT

ಫ್ಯಾಕ್ಟ್‌ಚೆಕ್‌: ಅರ್ಚಕರೊಬ್ಬರನ್ನು ಮುಸ್ಲಿಮರ ಗುಂಪು ಕೊಲ್ಲಲು ಯತ್ನಿಸಿತ್ತೆ?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 19:31 IST
Last Updated 11 ನವೆಂಬರ್ 2021, 19:31 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯೊಬ್ಬರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಗಾಯಗೊಂಡ ವ್ಯಕ್ತಿಯು ಉತ್ತರ ಪ್ರದೇಶದ ಮಿರ್ಜಾಪುರ ವಿಂದ್ಯಾಚಲ ದೇವಸ್ಥಾನದ ಅರ್ಚಕ ಅಮಿತ್‌ ಪಾಂಡೆ ಎಂದು ಹೇಳಲಾಗಿದೆ. ಮುಸ್ಲಿಮರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ ಕೊಲ್ಲಲು ಯತ್ನಿಸಿತ್ತು ಎಂದು ಬಿಂಬಿಸಲಾಗಿದೆ. ಹಿಂದೂಗಳು ಸುಮ್ಮನೆ ಇರುವ ವರೆಗೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಕೂಡಾ ವೈರಲ್‌ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ಘಟನೆ 2020ರ ಜೂನ್‌ನಲ್ಲಿ ನಡೆದಿದೆ. ಅಮಿತ್‌ ಪಾಂಡೆ ತಡರಾತ್ರಿ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಿದ್ದ ವೇಳೆ ಅರ್ಚಕರ ಗುಂಪೊಂದು ಅವರ ಮೇಲೆ ದಾಳಿ ಮಾಡಿತ್ತು ಎಂದು ಆಲ್ಟ್‌ ನ್ಯೂಸ್‌ ಹೇಳಿದೆ. ಈ ಮಾಹಿತಿಯನ್ನು ಅಮಿತ್‌ ಅವರ ಸಹೋದರ ಸುಮಿತ್‌ ಪಾಂಡೆ ನೀಡಿದ್ದಾರೆ. ಇದೇ ಚಿತ್ರ 2020ರ ಅಕ್ಟೋಬರ್‌ನಲ್ಲಿ ಇದೇ ರೀತಿಯ ಅಡಿ ಬರಹದೊಂದಿಗೆ ವೈರಲ್‌ ಆಗಿತ್ತು. ಆಗ ಪೊಲೀಸರು ಇಂಥ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT