ADVERTISEMENT

Fact check: ವಿಡಿಯೊದಲ್ಲಿ ಕತ್ತಿ ಹಿಡಿದಿರುವ ಮಹಿಳೆ ದೆಹಲಿ CM ಗುಪ್ತಾ ಅವರಲ್ಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 0:54 IST
Last Updated 28 ಫೆಬ್ರುವರಿ 2025, 0:54 IST
..
..   

ಮಹಿಳೆಯೊಬ್ಬರು ನದಿ ತಟದಲ್ಲಿ ವಿವಿಧ ಭಂಗಿಗಳಲ್ಲಿ ಕತ್ತಿ ಝಳಪಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕತ್ತಿ ಹಿಡಿದಿರುವ ಮಹಿಳೆಯು ದೆಹಲಿಯ ನೂತನ ರೇಖಾ ಗುಪ್ತಾ ಎಂದು ಪ್ರತಿಪಾದಿಸಲಾಗುತ್ತಿದ್ದು, ಇದು ಅವರ ಹಳೆಯ ವಿಡಿಯೊ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಇದೇ ಪೋಸ್ಟ್‌ ಕೆಳಗೆ ಕೆಲವರು ಇದು ಮರಾಠಿ ನಟಿ ಪಾಯಲ್ ಜಾಧವ್ ಅವರ ವಿಡಿಯೊ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅದರ ಆಧಾರದಲ್ಲಿ ಹುಡುಕಾಟ ನಡೆಸಿದಾಗ, ಪಾಯಲ್ ಜಾಧವ್ ನಟಿಯಾಗಿದ್ದು, ಹಲವು ಸಿನಿಮಾಗಳಲ್ಲಿ ಹಾಗೂ ಶೋಗಳಲ್ಲಿ ಭಾಗವಹಿಸಿದ್ದಾರೆ ಎನ್ನುವುದು ತಿಳಿಯಿತು. ಮತ್ತಷ್ಟು ಹುಡುಕಾಟ ನಡೆಸಿದಾಗ, ಪಾಯಲ್ ಜಾಧವ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೆ.19ರಂದು ವಿಡಿಯೊ ಹಂಚಿಕೊಂಡಿರುವುದು ಸಿಕ್ಕಿತು. ಮಾರ್ಷಲ್ ಆರ್ಟ್ಸ್ ತರಬೇತಿ ನೀಡುವ ‘ಸವ್ಯಸಾಚಿ ಗುರುಕುಲ’ಕ್ಕೆ ತಮ್ಮ ಪೋಸ್ಟ್ ಅನ್ನು ಅವರು ಟ್ಯಾಗ್ ಮಾಡಿದ್ದಾರೆ. ನಟಿಯ ವಿಡಿಯೊ ಎಂದೇ ಇದನ್ನು ರಾಜಶ್ರೀ ಮರಾಠಿ ಶೋಬುಜ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಮರಾಠಿ ನಟಿಯ ವಿಡಿಯೊ ಅನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಎಂದು ಕೆಲವರು ಸುಳ್ಳು ಪ್ರತಿ‍ಪಾದನೆಯೊಂದಿಗೆ ಹರಡುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT