ADVERTISEMENT

Fact Check: ಚಿತ್ರದಲ್ಲಿರುವ ಈ ವ್ಯಕ್ತಿ ಯೋಗಿ ಆದಿತ್ಯನಾಥರ ಸಹೋದರನೇ?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 15:44 IST
Last Updated 7 ಅಕ್ಟೋಬರ್ 2021, 15:44 IST
   

ಸಾದಾ ಪ್ಯಾಂಟ್, ಬನಿಯನ್ ಹಾಗೂ ಕೇಸರಿ ಶಾಲು ಧರಿಸಿರುವ ಈ ವ್ಯಕ್ತಿ ಟೀ ಅಂಗಡಿಯೊಂದರ ಮುಂದೆ ನಿಂತಿರುವ ಫೊಟೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಷೇರ್ ಆಗುತ್ತದೆ. ಮೇಲ್ನೋಟಕ್ಕೆ ಇವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೀತಿ ಕಾಣಿಸುತ್ತಾರೆ. ‘ಇವರು ಯೋಗಿ ಅವರನ್ನು ಹೋಲುತ್ತಿರುವ ಅವರ ಸಹೋದರ. ಟೀ ಅಂಗಡಿ ನಡೆಸುತ್ತಿದ್ದಾರೆ. ಅವರುಎಷ್ಟೊಂದು ಸರಳ’ ಎಂದು ಟ್ವಿಟರಿಗರು ಉಲ್ಲೇಖಿಸಿದ್ದಾರೆ. ಮಾಯಾವತಿ, ಮಮತಾ, ಅಖಿಲೇಶ್ ಅವರ ಕುಟುಂಬ ಸದಸ್ಯರು ಇವರನ್ನು ನೋಡಿ ಕಲಿಯಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಹಾಗೆ ಇವರು ಯೋಗಿ ಅವರ ಸಹೋದರ ಅಲ್ಲ ಎಂದು ಲಾಜಿಕಲ್ ಇಂಡಿಯನ್ಫ್ಯಾಕ್ಟ್ಚೆಕ್ವೇದಿಕೆ ತಿಳಿಸಿದೆ. ಯೋಗಿ ಅವರಿಗೆ ಮೂವರು ಸಹೋದರರಿದ್ದಾರೆ. ಅಣ್ಣ ಮಾನವೇಂದ್ರ ಮೋಹನ್ ಅವರು ಕೃಷಿಕ. ತಮ್ಮ ಶೈಲೇಂದ್ರ ಮೋಹನ್ ಬಿಸ್ತಾ ಅವರು ಸೇನೆಯಲ್ಲಿದ್ದಾರೆ. ಕಿರಿಯ ಸಹೋದರ ಮಹೇಂದ್ರ ಸಿಂಗ್ ಬಿಸ್ತಾ ಅವರು ಪತ್ರಕರ್ತ ಎಂದು ‘ದಿಆನ್‌ಸೆಸ್ಟ್ರಿ’ ಜಾಲತಾಣ ಮಾಹಿತಿ ನೀಡಿದೆ. ವೈರಲ್ ಆಗಿರುವ ಚಿತ್ರದಲ್ಲಿರುವ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲವಾದರೂ, ಅವರಿಗೂ ಯೋಗಿ ಕುಟುಂಬಕ್ಕೂ ಸಂಬಂಧವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT