ADVERTISEMENT

ಫ್ಯಾಕ್ಟ್ ಚೆಕ್: ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯಿತೇ?

ಫ್ಯಾಕ್ಟ್ ಚೆಕ್
Published 8 ಜನವರಿ 2026, 0:21 IST
Last Updated 8 ಜನವರಿ 2026, 0:21 IST
<div class="paragraphs"><p>ಫ್ಯಾಕ್ಟ್ ಚೆಕ್: ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯಿತೇ?</p></div>

ಫ್ಯಾಕ್ಟ್ ಚೆಕ್: ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯಿತೇ?

   

ಭೂಗತ ಕಟ್ಟಡವೊಂದರಿಂದ ಮಹಿಳೆಯರು ಹೊರಬರುತ್ತಿರುವ ವಿಡಿಯೊ ಮತ್ತು ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಉತ್ತರ ಪ್ರದೇಶದ ಗೋರಖ್‌ಪುರದ ಮಂದಿರವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು, ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿ ಹೊರಕ್ಕೆ ಕರತರಲಾಯಿತು ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅಂತಹ ಘಟನೆ ಏನಾದರೂ ನಡೆದಿದೆಯೇ ಎನ್ನುವುದನ್ನು ತಿಳಿಯಲು ನಿರ್ದಿಷ್ಟ ಪದದ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಲಾಯಿತು. ಅದನ್ನು ಸಾಬೀತುಪಡಿಸುವ ಯಾವುದೇ ವರದಿ ಕಂಡುಬರಲಿಲ್ಲ. ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರವಂಥದ್ದೇ ವಿಡಿಯೊ ಅನ್ನು  2021ರ ಡಿ.13ರಂದು ಹಲವರು  ಹಂಚಿಕೊಂಡಿರುವುದು ಕಂಡಿತು. ಮುಂಬೈನ ಅಂಧೇರಿ ಪಶ್ಚಿಮದ ದೀಪಾ ಡ್ಯಾನ್ಸ್ ಬಾರ್‌ ಮೇಲೆ ಪೊಲೀಸರು ದಾಳಿ ಮಾಡಿ, ರಹಸ್ಯ ಕೋಣೆಯಲ್ಲಿ ಅಡಗಿದ್ದ 17 ಮಹಿಳೆಯರನ್ನು ರಕ್ಷಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೋವಿಡ್ ನಿಯಮಗಳನ್ನು ಮೀರಿದ್ದೂ ಸೇರಿದಂತೆ ಹಲವು ಆರೋಪಗಳು ಬಾರ್ ವಿರುದ್ಧ ಕೇಳಿಬಂದಿದ್ದವು. ಬಾರ್‌ನ ವಿಡಿಯೊ ಹಂಚಿಕೊಂಡು ಕೆಲವರು ಅದು ದೇವಸ್ಥಾನದ ವಿಡಿಯೊ ಎಂದು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂಬುದಾಗಿ ‘ಫ್ಯಾಕ್ಟ್‌ಲಿ’ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.