ADVERTISEMENT

Factcheck: ಮುಸ್ಲಿಮರು 'ಅರೇಬಿಕ್' ನ್ಯೂಯಾರ್ಕ್‌ನ ಅಧಿಕೃತ ಭಾಷೆಯಾಗಲಿದೆ ಎಂದಿಲ್ಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
..
..   

ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿರುವುದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಮಾತನಾಡುತ್ತಿರುವ ವಿಡಿಯೊ ಹರಿದಾಡುತ್ತಿದೆ. ‘ನ್ಯೂಯಾರ್ಕ್‌, ಪಶ್ಚಿಮ ಏಷ್ಯಾದಿಂದ ಬಂದ ವಲಸಿಗರ ನಗರವಾಗಿದೆ. ನಾವು ಅರೇಬಿಕ್ ಅನ್ನು ನ್ಯೂಯಾರ್ಕ್ ನಗರದ ಅಧಿಕೃತ ಭಾಷೆಯನ್ನಾಗಿ ಮಾಡುತ್ತೇವೆ. ನಮಗೆ ಇಂಗ್ಲಿಷ್ ಬೇಡ’ ಎಂದು ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ ಎಂಬುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿನ ವ್ಯಕ್ತಿಗಳು ಅಸಹಜವಾಗಿ ಕಂಡರು. ಮಾತನಾಡುತ್ತಿರುವ ವ್ಯಕ್ತಿಯ ಹಿಂದೆ ನಿಂತಿರುವಾತನಿಗೆ ತಲೆಯೇ ಇಲ್ಲ. ವಿಡಿಯೊದಲ್ಲಿರುವ ಪ್ಯಾಲೆಸ್ಟೀನ್ ಬಾವುಟದಲ್ಲಿಯೂ ಹಲವು ರೀತಿಯ ವ್ಯತ್ಯಾಸಗಳು ಕಂಡವು. ಕೃತಕ ಬುದ್ಧಿಮತ್ತೆಯಿಂದ (ಎಐ) ರೂಪಿಸಿದ ವಿಡಿಯೊಗಳಲ್ಲಿ ಇಂಥ ವ್ಯತ್ಯಾಸಗಳಿರುವುದು ಸಹಜ. ಹೈವ್, ರಿಸೆಂಬಲ್ ಎಐ ಮತ್ತು ಹಿಯಾದಂಥ ಎಐ ಪತ್ತೆ ಸಾಧನಗಳ ಮೂಲಕ ವಿಡಿಯೊ ಅನ್ನು ಪರೀಕ್ಷಿಸಿದೆವು. ವಿಡಿಯೊ ಮತ್ತು ಅದರಲ್ಲಿರುವ ಧ್ವನಿಯ ಬಹುತೇಕ ಭಾಗಗಳು ಎಐ ನಿರ್ಮಿತ ಎನ್ನುವುದು ತಿಳಿಯಿತು. ನಿರ್ದಿಷ್ಟ ಪದದ ಮೂಲಕ ಹುಡುಕಾಡಿದಾಗ, ನ್ಯೂಯಾರ್ಕ್ ನಗರದಲ್ಲಿ ಮುಸ್ಲಿಮರು ಇತ್ತೀಚೆಗೆ ಪ್ರತಿಭಟನೆ ನಡೆಸಿದ ಬಗ್ಗೆ ಯಾವುದೇ ಸುದ್ದಿ/ವರದಿ ಕಾಣಲಿಲ್ಲ. ಎಐ ನಿರ್ಮಿತ ವಿಡಿಯೊ ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿ‍ಪಾದನೆ ಮಾಡುತ್ತಿದ್ದಾರೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT