
ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರು ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಹೇಳಿಕೊಂಡು ಫೇಸ್‌ಬುಕ್ ಬಳಕೆದಾರರೊಬ್ಬರು ಒಂದಷ್ಟು ಜನರು ಪ್ರದೇಶವೊಂದರಲ್ಲಿ ಸೇರಿರುವ ಮತ್ತು ಮುಸ್ಲಿಂ ಧರ್ಮಗುರು ಒಬ್ಬರು ಮಾತನಾಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ‘ಬೋಂಡಿ ಹತ್ಯಾಕಾಂಡದ ಬಗ್ಗೆ ಆಸ್ಟ್ರೇಲಿಯಾದಲ್ಲಿ ಮುಸ್ಲಿಮರು ಖುಷಿಯಾಗಿದ್ದಾರೆ. ಅದನ್ನು ಸಂಭ್ರಮಿಸಲು ಅವರು ಪಟಾಕಿಗಳನ್ನು ಕೂಡ ಹಚ್ಚಿದ್ದಾರೆ. ಪ್ರತಿ ದೇಶದಿಂದಲೂ ಅವರನ್ನು ಅರಬ್ ರಾಷ್ಟ್ರಗಳಿಗೆ ಗಡಿಪಾರು ಮಾಡಬೇಕು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು. ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರು ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಹೇಳಿಕೊಂಡು ಫೇಸ್‌ಬುಕ್ ಬಳಕೆದಾರರೊಬ್ಬರು ಒಂದಷ್ಟು ಜನರು ಪ್ರದೇಶವೊಂದರಲ್ಲಿ ಸೇರಿರುವ ಮತ್ತು ಮುಸ್ಲಿಂ ಧರ್ಮಗುರು ಒಬ್ಬರು ಮಾತನಾಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ‘ಬೋಂಡಿ ಹತ್ಯಾಕಾಂಡದ ಬಗ್ಗೆ ಆಸ್ಟ್ರೇಲಿಯಾದಲ್ಲಿ ಮುಸ್ಲಿಮರು ಖುಷಿಯಾಗಿದ್ದಾರೆ. ಅದನ್ನು ಸಂಭ್ರಮಿಸಲು ಅವರು ಪಟಾಕಿಗಳನ್ನು ಕೂಡ ಹಚ್ಚಿದ್ದಾರೆ. ಪ್ರತಿ ದೇಶದಿಂದಲೂ ಅವರನ್ನು ಅರಬ್ ರಾಷ್ಟ್ರಗಳಿಗೆ ಗಡಿಪಾರು ಮಾಡಬೇಕು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು.
ವಿಡಿಯೊದ ಕೀಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ವಿಧಾನದ ಮೂಲಕ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ ಇದೇ ವಿಡಿಯೊವನ್ನು ಹಲವರು ಹಂಚಿಕೊಂಡಿರುವುದು ಕಂಡು ಬಂತು. ಇನ್ನಷ್ಟು ಪರಿಶೀಲನೆ ನಡೆಸಿದಾಗ 2023ರ ಅಕ್ಟೋಬರ್ 9ರಂದು ಡೇವಿಡ್ ಆರ್ಥರ್ಟನ್ ಎಂಬ ‘ಎಕ್ಸ್’ ಬಳಕೆದಾರ ಇದೇ ವಿಡಿಯೊವನ್ನು ಪೋಸ್ಟ್ ಮಾಡಿರುವುದು ಸಿಕ್ಕಿತು. ಇದರ ಆಧಾರದಲ್ಲಿ ರಿವರ್ಸ್ ಇಮೇಜ್ ವಿಧಾನದಲ್ಲಿ ಹುಡುಕಾಡಿದಾಗ 2023ರ ಅಕ್ಟೋಬರ್ 9ರಂದು ಡೈಲಿ ಮೇಲ್ ಪ್ರಕಟಿಸಿದ್ದ ವರದಿ ಸಿಕ್ಕಿತು. ‘ನೂರಾರು ಯಹೂದಿಗಳನ್ನು ಹತ್ಯೆ ಮಾಡಿದ ಪ್ಯಾಲೆಸ್ಟೀನಿಯನ್ನರನ್ನು ಶೇಖ್ ಇಬ್ರಾಹಿಂ ಡಡೌನ್ ಎಂಬ ಮುಸ್ಲಿಂ ಮೌಲ್ವಿಯು ಪ್ರಾರ್ಥನೆಯ ಸಂದರ್ಭದಲ್ಲಿ ಹೊಗಳಿದರು’ ಎಂದು ವರದಿಯಲ್ಲಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನೂ ಡೈಲಿ ಮೇಲ್ ಪ್ರಕಟಿಸಿತ್ತು. ಸ್ಕೈ ನ್ಯೂಸ್ ಆಸ್ಟ್ರೇಲಿಯಾ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅದೇ ದಿನ ಈ ವಿಡಿಯೊ ಪ್ರಕಟಿಸಿತ್ತು. ಎರಡು ವರ್ಷಗಳ ಹಿಂದಿನ ಸಂಭ್ರಮಾಚರಣೆ ವಿಡಿಯೊವನ್ನು ಬೋಂಡಿ ಬೀಚ್ ಪ್ರಕರಣಕ್ಕೆ ತಳಕುಹಾಕಲಾಗಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.