ADVERTISEMENT

ರಾಷ್ಟ್ರಧ್ವಜಕ್ಕೆ ಎಡಗೈನಲ್ಲಿ ಸಲ್ಯೂಟ್ ಮಾಡಿದರೇ ರಾಹುಲ್ ಗಾಂಧಿ?

ಫ್ಯಾಕ್ಟ್‌ಚೆಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2020, 5:52 IST
Last Updated 28 ಜನವರಿ 2020, 5:52 IST
ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಚಿತ್ರ
ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಚಿತ್ರ   
""

ಬೆಂಗಳೂರು:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಕ್ಕೆ ಎಡಗೈನಲ್ಲಿ ಸಲ್ಯೂಟ್ ಮಾಡಿದ್ದಾರೆ ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ. ಆದರೆ, ಅದು ಎಡಿಟ್ ಮಾಡಿದ ಚಿತ್ರ ಎಂಬುದು ತಿಳಿದುಬಂದಿದೆ.

‘ಝೀ ನ್ಯೂಸ್ ಗ್ಲೋಬಲ್ ಫ್ಯಾನ್ಸ್’ ಎಂಬ ಫೇಸ್‌ಬುಕ್‌ ಪುಟದಲ್ಲಿರಾಹುಲ್ ಅವರುಎಡಗೈನಲ್ಲಿ ಸಲ್ಯೂಟ್ ಮಾಡುವ ಚಿತ್ರ ಪ್ರಕಟಿಸಿ, ‘ಯಾವ ಕೈಯಲ್ಲಿ ಸಲ್ಯೂಟ್ ಮಾಡಬೇಕು ಎಂಬುದೂ ಈ ಮಹಾನ್ ನಾಯಕನಿಗೆ ತಿಳಿದಿಲ್ಲ. ಇವರು ದೇಶದ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ’ ಎಂಬ ವಿವರಣೆಯನ್ನೂ ಬರೆಯಲಾಗಿದೆ.

ಈ ಕುರಿತುಇಂಡಿಯಾ ಟುಡೆಫ್ಯಾಕ್ಟ್‌ ಚೆಕ್ ಮಾಡಿದ್ದು, ರಾಹುಲ್ ಅವರು ಬಲಗೈನಲ್ಲಿ ಸಲ್ಯೂಟ್ ಮಾಡಿದ ಚಿತ್ರವನ್ನು ತಿರುಚಿ ಎಡಿಟ್ ಮಾಡಿ ಪ್ರಕಟಿಸಲಾಗಿದೆ ಎಂದು ವರದಿ ಮಾಡಿದೆ.

ADVERTISEMENT

ಎಡಿಟ್ ಮಾಡಲು ಬಳಸಿದ ಈ ಚಿತ್ರವು 65ನೇ ಸ್ವಾತಂತ್ರ್ಯೋತ್ಸವದ ಸಂದರ್ಭದ್ದು. ಆ ಚಿತ್ರವನ್ನು ಅನೇಕ ಸುದ್ದಿ ಮಾಧ್ಯಮಗಳು ಅಂದಿನ ವರದಿಗಳಲ್ಲಿ ಬಳಸಿದ್ದವು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.