ADVERTISEMENT

Fact Check: ಮಮತಾ ಬ್ಯಾನರ್ಜಿ ಬಲಗಾಲಿಗೆ ಗಾಯ, ಎಡಗಾಲಿಗೆ ಬ್ಯಾಂಡೇಜ್‌?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 19:30 IST
Last Updated 14 ಮಾರ್ಚ್ 2021, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

‘ಮಮತಾ ಬ್ಯಾನರ್ಜಿ ಅವರ ಬಲಗಾಲಿಗೆ ಗಾಯವಾಗಿದೆ. ಅದಕ್ಕೆ ಬ್ಯಾಂಡೇಜ್‌ ಸುತ್ತಿಕೊಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅವರ ಎಡಗಾಲಿಗೆ ಬ್ಯಾಂಡೇಜ್ ಸುತ್ತಲಾಗಿದೆ. ಚುನಾವಣಾ ಪ್ರಚಾರಕ್ಕೋಸ್ಕರ ಅವರು ಇಂತಹ ನಾಟಕವಾಡುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿಯ ಹಲವು ಕಾರ್ಯಕರ್ತರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಬಲಗಾಲಿನ ಹಿಮ್ಮಡಿಗೆ ಕ್ರೇಪ್‌ಬ್ಯಾಂಡ್ ಸುತ್ತಿರುವ ಚಿತ್ರವೂ ಈ ಪೋಸ್ಟ್‌ಗಳಲ್ಲಿ ಇದೆ.

ಇದು ಸುಳ್ಳು ಸುದ್ದಿ. ಈ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಇದು ಹಳೆಯ ಚಿತ್ರ. 2020ರ ನವೆಂಬರ್ 16ರಂದು ಹಿರಿಯ ನಟ ಸೌಮಿತ್ರಾ ಚಟರ್ಜಿ ಅವರ ಅಂತಿಮದರ್ಶನಕ್ಕೆ ಬಂದಿದ್ದಾಗ ತೆಗೆಯಲಾಗಿದ್ದ ಮಮತಾ ಅವರ ಚಿತ್ರವನ್ನು, ಈಗಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಪಾದದ ನೋವಿನ ಕಾರಣಕ್ಕೆ ಮಮತಾ ಅವರ ಬಲಗಾಲಿನ ಹಿಮ್ಮಡಿಗೆ ಗುಲಾಬಿ ಬಣ್ಣದ ಕ್ರೇಪ್‌ಬ್ಯಾಂಡ್‌ ಹಾಕಲಾಗಿತ್ತು. ಅದನ್ನೇ ಬ್ಯಾಂಡೇಜ್‌ ಎಂದು ಹೇಳುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಳೆಯ ಚಿತ್ರವನ್ನು ಈಗ ಹಂಚಿಕೊಳ್ಳಲಾಗುತ್ತಿದೆ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT