ADVERTISEMENT

Fact Check: ಮೆಕ್ಕಾದಲ್ಲಿರುವುದು ಶಿವಲಿಂಗ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 6 ನವೆಂಬರ್ 2023, 23:30 IST
Last Updated 6 ನವೆಂಬರ್ 2023, 23:30 IST
   

‘ಸತ್ಯವನ್ನು ಮರೆ ಮಾಡಲು ಯಾರಿದಂಲೂ ಸಾಧ್ಯವಿಲ್ಲ. ಸರ್ವವೂ ಜಗದೊಡೆಯ ಶಿವನದೇ. ಮೆಕ್ಕಾದಲ್ಲಿರುವುದು ಶಿವಲಿಂಗ. ಎಲ್ಲಾ ಹಿಂದುಗಳೂ ತಪ್ಪದೇ ಶೇರ್‌ ಮಾಡಿ. ಹರ ಹರ ಮಹಾದೇವ’ ಎಂಬ ಬರಹ ಇರುವ ಪೋಸ್ಟ್‌ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಅದರ ಜತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಳ್ಳಲಾಗಿದೆ. ಮುಸ್ಲಿಮರು ಪರದೆಯ ಮರೆಯಲ್ಲಿರುವ ಶಿಲೆಯೊಂದನ್ನು ಮುಟ್ಟಿ ಪ್ರಾರ್ಥಿಸುತ್ತಿರುವ ದೃಶ್ಯ ಅದರಲ್ಲಿದೆ. ಮೆಕ್ಕಾದಲ್ಲಿ ಶಿವಲಿಂಗವಿದೆ. ಅದನ್ನೇ ಪರದೆಯಿಂದ ಮುಚ್ಚಲಾಗಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದು ತಪ್ಪು ಮಾಹಿತಿ.

‘ಇದು ಸುಳ್ಳು ಸುದ್ದಿ. ಮೆಕ್ಕಾದಲ್ಲಿರುವ ಕಾಬಾದ ನಾಲ್ಕು ಮೂಲೆಗಳ ಪೈಕಿ ಯೆಮನ್ ಮೂಲೆಯ ವಿಡಿಯೊವನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆ ವಿಡಿಯೊದಲ್ಲಿ ಇರುವ ಶಿಲೆಯನ್ನು ಮುಸ್ಲಿಮರು ಮುಟ್ಟಿ ಪ್ರಾರ್ಥನೆ ಮಾಡುತ್ತಾರೆ. ಭಾರತದ ಹಜ್ ಸಮಿತಿ ಸಿದ್ಧಪಡಿಸಿದ ಹಜ್ ಯಾತ್ರೆ ಕೈಪಿಡಿಯಲ್ಲೂ ಈ ಮಾಹಿತಿ ಇದೆ. ಮೆಕ್ಕಾದ ಯೆಮನ್‌ ಮೂಲೆಯ ಶಿಲೆಯ ಬಗೆಗಿನ ಮಾಹಿತಿಯನ್ನು ತಿರುಚಿ ಈ ಸುಳ್ಳು ಸುದ್ದಿ ಸೃಷ್ಠಿಸಲಾಗಿದೆ’ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT