ADVERTISEMENT

ಫ್ಯಾಕ್ಟ್ ಚೆಕ್: ಮೂರು ಕಡೆ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 19:30 IST
Last Updated 10 ಆಗಸ್ಟ್ 2021, 19:30 IST
ಫ್ಯಾಕ್ಟ್ ಚೆಕ್: ಮೂರು ಕಡೆ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ?
ಫ್ಯಾಕ್ಟ್ ಚೆಕ್: ಮೂರು ಕಡೆ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ?   

ದೇಶದ ಸರ್ವೋಚ್ಛ ನ್ಯಾಯಾಲಯವಾಗಿರುವ ಸುಪ್ರೀಂ ಕೋರ್ಟ್‌ ದೆಹಲಿಯಲ್ಲಿದ್ದು, ದೇಶದ ಇತರ ಭಾಗಗಳ‌ಲ್ಲೂ ಅದರ ಪೀಠ ರಚನೆ ಮಾಡುವ ಪ್ರಸ್ತಾವವಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಇಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಕೋಲ್ಕತ್ತ, ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಸುಪ್ರೀಂ ಕೋರ್ಟ್‌ನ ಶಾಖೆಗಳು ರಚನೆಯಾಗಲಿವೆ ಎಂಬ ಉಲ್ಲೇಖವಿದೆ. ದೇಶದ ವಿವಿಧ ಭಾಗದ ಜನರು ಅರ್ಜಿ ಸಲ್ಲಿಸಲು ದೆಹಲಿಗೆ ಹೋಗುವ ಅನಿವಾರ್ಯತೆ ಇನ್ನು ಇರುವುದಿಲ್ಲ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಪ್ರೀಂ ಕೋರ್ಟ್ ಪೀಠ ರಚನೆ ಪ್ರಸ್ತಾವ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಪೀಠ ರಚನೆ ಸಂಬಂಧ ಕೇಂದ್ರ ಸರ್ಕಾರವು ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಹಾಗೂ ಘೋಷಣೆ ಹೊರಡಿಸಿಲ್ಲ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT