ADVERTISEMENT

ಬಾಂಗ್ಲಾದೇಶದಲ್ಲಿ ಟ್ಯಾಗೋರ್‌ ಪ್ರತಿಮೆ ಭಗ್ನಗೊಳಿಸಲಾಗಿದೆ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 11 ಆಗಸ್ಟ್ 2024, 22:44 IST
Last Updated 11 ಆಗಸ್ಟ್ 2024, 22:44 IST
   

ಬಂಗಾಳಿ ಸಾಹಿತ್ಯದ ಮೇರು ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆ ಭಗ್ನಗೊಂಡು ಕೆಳಗೆ ಬಿದ್ದಿರುವ ಚಿತ್ರ ಮತ್ತು ಅವರ ಪ್ರತಿಮೆಯನ್ನು ಗುಂಪೊಂದು ಪ್ರತಿಷ್ಠಾಪಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಿಂಸಾಚಾರದ ವೇಳೆ ಬಾಂಗ್ಲಾದೇಶದಲ್ಲಿ ಟ್ಯಾಗೋರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಲಾಗಿದೆ ಎಂದು ಚಿತ್ರವನ್ನು ಹಂಚಿಕೊಂಡು ಪ್ರತಿಪಾದನೆ ಮಾಡಲಾಗುತ್ತಿದೆ. ಆದರೆ, ಈ ಪ್ರತಿಪಾದನೆ ಸುಳ್ಳು.

ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಈ ಬಗ್ಗೆ 2023ರಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿ ಕಂಡುಬಂತು. ಅದರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯ ರುಂಡವು ನಾಪತ್ತೆಯಾಗಿರುವ ಬಗ್ಗೆ ವರದಿ ಮಾಡಲಾಗಿತ್ತು. ನಂತರ ಅದು ಡಾಕಾ ವಿಶ್ವವಿದ್ಯಾಲಯದ ಉದ್ಯಾನದಲ್ಲಿ ಪತ್ತೆಯಾಗಿತ್ತು. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಅನಧಿಕೃತ ಎಂದು ತೆರವುಗೊಳಿಸಿತ್ತು. ವಿದ್ಯಾರ್ಥಿಗಳು ಮತ್ತೊಮ್ಮೆ ಅದನ್ನು ಪ್ರತಿಷ್ಠಾಪಿಸಿದ್ದರು. ಇದರ ಬಗ್ಗೆ ವರದಿ ಉಲ್ಲೇಖಿಸಿದೆ. ಈಗ ಶೇಖ್ ಮುಜೀಬುರ್ ರಹಮಾನ್ ಅವರ ಪ್ರತಿಮೆಯ ಭಗ್ನಾವಶೇಷಗಳೊಂದಿಗೆ ವಿಡಿಯೊ ಅನ್ನು ಹಂಚಿಕೊಳ್ಳಲಾಗುತ್ತಿದೆ. ಟ್ಯಾಗೋರ್ ಅವರ ಪ್ರತಿಮೆಯ ಹಳೆಯ ಚಿತ್ರ ಮತ್ತು ವಿಡಿಯೊ ಅನ್ನು ಈಗ ಹಂಚಿಕೊಂಡು, ಅವಕ್ಕೂ ಬಾಂಗ್ಲಾದೇಶದ ಹಿಂಸಾಚಾರಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT