ADVERTISEMENT

Fact check: ತಾಲಿಬಾನಿಗಳು ತಾಯಿ, ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 18:06 IST
Last Updated 16 ಜನವರಿ 2022, 18:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಹಿಳೆಯು ಕಾರು ಓಡಿಸುತ್ತಿದ್ದಳು ಎಂಬ ಕಾರಣಕ್ಕೆ ತಾಲಿಬಾನಿಗಳು ತಾಯಿ ಹಾಗೂ ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ವಿಡಿಯೊವನ್ನು ಹಂಚಿಕೊಂಡಿರುವ ಕೆಲವರು, ಇದನ್ನು ಭಾರತದ ಮುಸ್ಲಿಮರ ಜೊತೆ ಹೋಲಿಕೆ ಮಾಡುವ ಯತ್ನ ಮಾಡಿದ್ದಾರೆ. ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಈ ಅಮಾಯಕರನ್ನು ಹೊಡೆದುರುಳಿಸಿದವರು ನಿಮ್ಮ ಮುಸ್ಲಿಂ ಸಹೋದರರೇ ಎನ್ನುವುದನ್ನು ತಿಳಿಯಬೇಕು’ ಎಂದು ಯೋಗಿ ಯೋಗೇಶ ಎಂಬುವರು ಟ್ವೀಟ್ ಮಾಡಿದ್ದಾರೆ.

ತಾಲಿಬಾನಿಯರುಮಹಿಳೆಯರ ಹಕ್ಕುಗಳನ್ನು ಪ್ರಬಲವಾಗಿ ವಿರೋಧಿಸುತ್ತಾರೆ. ಆದರೆ ಈ ವಿಡಿಯೋಗೂ, ಅವರಿಗೂ ಸಂಬಂಧವಿಲ್ಲ ಎಂದು ಇಂಡಿಯಾಟುಡೇ ವರದಿ ಮಾಡಿದೆ. ಈ ಘಟನೆ ಪಾಕಿಸ್ತಾನದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳೂ ಹತರಾಗಿದ್ದಾರೆ. ಘಟನೆ ನಡೆದಾಗ ಗಂಡ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಕಾರಿನ ನಂಬರ್‌ ಪ್ಲೇಟ್ ಗಮನಿಸಿದಾಗ, ಇದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ್ದು ಎಂದು ತಿಳಿದುಬಂದಿದೆ.ಕುಟುಂಬದ ಹಗೆತನದ ಕಾರಣಕ್ಕೆ ಈ ಹತ್ಯೆ ನಡೆದಿದೆ. ಈ ಕುರಿತು ಡಾನ್ ನ್ಯೂಸ್ ಹಾಗೂ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ಸುದ್ದಿಸಂಸ್ಥೆಗಳು ವಿವರವಾದ ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT