ADVERTISEMENT

ಫ್ಯಾಕ್ಟ್‌ಚೆಕ್‌: ಬೆಂಗಳೂರಿಗೆ ಸಂಬಂಧಿಸಿದ ಚಿತ್ರಗಳು ಇವಲ್ಲ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 18:25 IST
Last Updated 27 ಆಗಸ್ಟ್ 2020, 18:25 IST
   

ಬೆಂಗಳೂರಿನಲ್ಲಿ ಮೇಲ್ಸೇತುವೆ ಕುಸಿದು ಅವಘಡ ಸಂಭವಿಸಿದೆ. ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾಲ್ ಬಳಿಕ ದುರಂತ ನಡೆದಿದೆ ಎಂದು ಸುಮನ್ ಎಂಬುವರು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ. ಆದರೆ ಮುಂಬೈ ಫೀನಿಕ್ಸ್‌ ಮಾಲ್ ಬಳಿ ಮೆಟ್ರೊ ಸೇತುವೆ ಕುಸಿದಿದೆ ಎಂದು ರಾಜ್‌ದೀಪ್ ಪ್ರಶಾರ್ ಎಂಬ ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರುಅಹಮದಾಬಾದ್‌ನಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಕಟಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಬೆಂಗಳೂರು,ಅಹಮದಾಬಾದ್‌ ಅಥವಾ ಮುಂಬೈಗೆ ಸಂಬಂಧಿಸಿದ ಚಿತ್ರಗಳು ಇವಲ್ಲ. ಆಗಸ್ಟ್ 22ರಂದು ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದ್ದನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ರಾತ್ರಿ ಹೊತ್ತು ಸೇತುವೆ ಕುಸಿದಿದ್ದರಿಂದ ಇಬ್ಬರು ಕಾರ್ಮಿಕರು ಗಾಯಗೊಂಡು, ಆಗಬಹುದಾದ ದೊಡ್ಡ ಅಪಾಯ ತಪ್ಪಿದೆ. ಈ ಚಿತ್ರಗಳನ್ನೇ ಇಟ್ಟುಕೊಂಡು ಇಲ್ಲೇ ಆಗಿದೆ ಎಂಬಂತೆ ಚಿತ್ರಿಸಲಾಗಿದೆ ಎಂದು ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT