ಭಾರತದ ಮಾಧ್ಯಮಗಳ ಪ್ರಸ್ತುತ ಸ್ಥಿತಿಯನ್ನು ಬಿಂಬಿಸುವ ಕಾರ್ಟೂನ್ ಅನ್ನು ಅಮೆರಿಕದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಬರೆದಿದ್ದಾರೆ. ‘ಲಿಪ್‌ಸ್ಟಿಕ್ ಆನ್ ಎ ಪಿಗ್’ ಹೆಸರಿನ ಚಿತ್ರವನ್ನು ಹಲವು ಫೇಸ್‌ಬುಕ್ ಬಳಕೆದಾರರು ಹಂಚಿ ಕೊಂಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಇದು ಸುದ್ದಿಯಾಗುತ್ತಿದೆ.
ಆದರೆ ಈ ಚಿತ್ರವನ್ನು ತಿರುಚಲಾಗಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಅಮೆರಿಕದ ಹಿಲರಿ ಕ್ಲಿಂಟನ್ ಮತ್ತು ಅವರ ಮೇಲಿನ ಹಗರಣ ಆರೋಪಗಳ ಬಗ್ಗೆ ಮೂಲ ಕಾರ್ಟೂನ್ ರಚನೆಯಾಗಿತ್ತು. ಭಾರತದ ರಾಜಕೀಯದ ಬಗ್ಗೆ ತಾವು ಎಂದೂ ಚಿತ್ರ ಬರೆದಿಲ್ಲ ಎಂಬುದಾಗಿ ಗ್ಯಾರಿಸನ್ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರ 2017ರಿಂದಲೂ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.