ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ: ಸ್ವಚ್ಛತೆಗೆ ಆದ್ಯತೆ 

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 8:37 IST
Last Updated 28 ಮಾರ್ಚ್ 2020, 8:37 IST
   

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಲ್ಲಿ ಮೂರು ಅವಧಿಗೆ ಉಚಿತ ಆಹಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧಿರಿಸಿದೆ. ಆದರೆ, ಕೆಲ ಷರತ್ತುಗಳನ್ನೂ ಸರ್ಕಾರ ವಿಧಿಸಿದೆ.

ಸ್ವಚ್ಛತೆ ಮತ್ತು ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡುವಂತೆ ಸರ್ಕಾರ ಕೋರಿದೆ.

ಸರ್ಕಾರದ ಪ್ರಕಟಣೆಯಲ್ಲೇನಿದೆ?

ADVERTISEMENT

ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ 07.30ರಿಂದ 10.00ರ ವರೆಗೆ, ಮಧ್ಯಾಹ್ನ 12.30 ರಿಂದ 3ರ ವರೆಗೆ, ರಾತ್ರಿ 7.30ರಿಂದ 9ರ ವರೆಗೆ ಆಹಾರ ವಿತರಿಸಲು ಸರ್ಕಾರ ನಿರ್ಧಿಸಿದೆ. ಈ ಅವಧಿಯಲ್ಲಿ ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಬಡ ನಾಗರಿಕರು ಉಚಿತವಾಗಿ ಆಹಾರ ಪಡೆಯಬಹುದು.

ನಾಗರಿಕರು ಸ್ವಚ್ಛತೆ ಕಾಪಾಡಬೇಕು. ಸ್ಯಾನಿಟೈಸರ್‌ಗಳಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಅದಕ್ಕಾಗಿ ಕ್ಯಾಂಟೀನ್‌ಗಳಲ್ಲಿ ಸಾಬೂನು, ಸ್ಯಾನಿಟೈಸರ್‌ಗಳನ್ನು ಇರಿಸಬೇಕು. ಆಹಾರದ ಕೂಪನ್‌ ಪಡೆಯುವಾಗ ವ್ಯಕ್ತಿಯಿಂದ ವ್ಯಕ್ತಿ ಒಂದು ಮೀಟರ್‌ ಅಂತರ ದೂರದಲ್ಲಿ ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್‌ ಧರಿಸಿರಬೇಕು ಎಂದು ಸರ್ಕಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.