ADVERTISEMENT

ಅಂತರ ರಾಷ್ಟ್ರೀಯ ವಿಜ್ಞಾನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ನವದೆಹಲಿ: ಇದೇ 10ರಿಂದ ಇಲ್ಲಿ ನಡೆಯಲಿರುವ `ವೈಜ್ಞಾನಿಕ ಸ್ಥಿತಿ~ ಕುರಿತ ಅಂತರ ರಾಷ್ಟ್ರೀಯ ಸಮಾವೇಶಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಮತ್ತು ಕಲಾವಿದರು ಒಂದೇ ವೇದಿಕೆಯಡಿ ಕಾಣಿಸಿಕೊಳ್ಳಲಿದ್ದಾರೆ.

ಮೂರು ದಿನಗಳ ಸಮಾವೇಶದಲ್ಲಿ ವಿಜ್ಞಾನ ಸಂಪರ್ಕ ಮತ್ತು ಸಾರ್ವಜನಿಕ ತಿಳಿವಳಿಕೆ ನಡುವಿನ ಅಂತರ ದೂರ ಮಾಡುವ ಬಗ್ಗೆ ಚರ್ಚಿಸಲಾಗುತ್ತದೆ. 20 ರಾಷ್ಟ್ರಗಳ 200 ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಪ್ರಥಮ ಬಾರಿಗೆ ಇಂತಹದ್ದೊಂದು ಕಾರ್ಯಕ್ರಮದ ಆತಿಥ್ಯವನ್ನು ಭಾರತ ವಹಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.