ADVERTISEMENT

ಅಜೆಂಡಾ ಇಲ್ಲ: ರಾಮದೇವ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಅಹಮದಾಬಾದ್ (ಪಿಟಿಐ): ಕಪ್ಪು ಹಣದ ಕುರಿತು ಗುರುವಾರದಿಂದ ಎರಡನೇ ಹಂತದ ಚಳವಳಿ ಆರಂಭಿಸಲು ಸಿದ್ಧತೆ ನಡೆಸಿರುವ ಯೋಗ ಗುರು ರಾಮದೇವ್, ತಮ್ಮ ಸಂಘಟನೆ ರಾಜಕೀಯದ ಯಾವುದೇ ಕಾರ್ಯಸೂಚಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಪಾಲ ಮಸೂದೆ, ಸಿಬಿಐ ಅನ್ನು ಸ್ವತಂತ್ರ ತನಿಖಾ ಸಂಸ್ಥೆಯನ್ನಾಗಿ ರೂಪಿಸುವುದು, ಚುನಾವಣಾ ಆಯುಕ್ತರು, ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪಾರದರ್ಶಕ ನೀತಿ ಪಾಲಿಸುವ ಬೇಡಿಕೆಯನ್ನೂ ಮುಂದಿಟ್ಟು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಕೈಗೊಳ್ಳಲಿದ್ದಾರೆ.

ಠಾಕ್ರೆ ಟೀಕಾಸ್ತ್ರ
ಮುಂಬೈ (ಪಿಟಿಐ):  ಬರ್ಖಾಸ್ತುಗೊಂಡಿರುವ `ಅಣ್ಣಾ ತಂಡ~ದ ವಿರುದ್ಧ ಹರಿಹಾಯ್ದಿರುವ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ, ರಾಜಕಾರಣಿಗಳನ್ನು ನಿಂದಿಸುವುದಷ್ಟೇ ಆ ತಂಡದ ಏಕೈಕ ಗುರಿಯಾಗಿತ್ತು ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.