ADVERTISEMENT

ಅಡ್ವಾಣಿ ರಥಯಾತ್ರೆ ಸ್ಥಳದಲ್ಲಿ ಬದಲಾವಣೆ: ಸಿತಾಬ್ದಿಯಾರ್ ಬದಲಿಗೆ ಛಾಪ್ರಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಪಟ್ನಾ: ಈ ತಿಂಗಳ 11ರಂದು ಬಿಜೆಪಿ ಮುಖಂಡ ಅಡ್ವಾಣಿ ಅವರ ರಥಯಾತ್ರೆ ಆರಂಭವಾಗಬೇಕಿದ್ದ ಜಯಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಬಿಹಾರದ ಸಿತಾಬ್ದಿಯಾರ್, ಮಳೆ ಯಿಂದ ಜಲಾವೃತಗೊಂಡಿರುವುದರಿಂದ ಯಾತ್ರೆಯ ನಿಗದಿತ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ಸಿತಾಬ್ದಿಯಾರ್ ಬದಲಿಗೆ ಛಾಪ್ರಾ ದಿಂದ ಯಾತ್ರೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಹಸಿರು ನಿಶಾನೆ ತೋರಿಸಲಿದ್ದಾರೆ.

ಈಗ ಸರನ್ ಎಂದು ಕರೆಯಲಾ ಗುತ್ತಿರುವ ಛಾಪ್ರಾ ಲೋಕಸಭಾ ಕ್ಷೇತ್ರವನ್ನು ಲಾಲೂ ಪ್ರಸಾದ್ ಪ್ರತಿನಿ ಧಿಸುತ್ತಿದ್ದರು ಹಾಗೂ 1990ರ ಅಕ್ಟೋಬರ್ 23ರಂದು ಅಡ್ವಾಣಿ ಅವರ ರಥಯಾತ್ರೆಯನ್ನು ತಡೆದು ಅವರನ್ನು ಬಂಧಿಸಲು ಆದೇಶಿಸಿದ್ದರು. ಈಗ ಅದೇ ಲೋಕಸಭಾ ಕ್ಷೇತ್ರದಿಂದ ರಥಯಾತ್ರೆ ಅರಂಭವಾಗುತ್ತಿರುವುದು ವಿಶೇಷ.

ಅಕ್ಟೋಬರ್ 11 ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ. ಅವರು ಸಹ ಭ್ರಷ್ಟಾಚಾರದ ವಿರುದ್ಧ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ್ದರು. ಆದ್ದರಿಂದ ಅಂದೇ ಅವರ  ಹುಟ್ಟೂರಿ ನಿಂದ ರಥಯಾತ್ರೆ ಆರಂಭಿಸಬೇಕು ಎಂಬುದು ಅಡ್ವಾಣಿ ಬಯಕೆಯಾಗಿತ್ತು.

`ಸಿತಾಬ್ದಿಯಾರ್‌ನಲ್ಲಿನ ಜೆ.ಪಿ ಅವರ ಪುತ್ಥಳಿಗೆ ಅಡ್ವಾಣಿ ಅವರು ಹಾರ ಹಾಕಿದ ನಂತರ ಛಾಪ್ರಾದಲ್ಲಿ ಯಾತ್ರೆಯ ಉದ್ಘಾಟನೆ ನಡೆಯಲಿದೆ~ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. 11ರಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಪಟ್ನಾಗೆ ಬರಲಿರುವ ಅಡ್ವಾಣಿ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಛಾಪ್ರಾಗೆ ತೆರಳಲಿದ್ದಾರೆ.

ಸಂಜೆ ಗಾಂಧಿ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಮೈದಾನದಲ್ಲಿ ಜೆ.ಪಿ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.