ಸಹರಾನ್‌ಪುರ: ಬಿಜೆಪಿ ಶಾಸಕ ರೋಷನ್‌ಲಾಲ್ ವರ್ಮಾ ಅವರ ಮಗ ಮನೋಜ್ ವರ್ಮಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆದರೆ, ವರ್ಮಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಆ ಮಹಿಳೆ ಧರಣಿ ನಡೆಸಿದ್ದರು. ‘ಇದು ಹಳೆಯ ವಿಷಯವಾಗಿದ್ದು, ಈ ಆರೋಪದ ಹಿಂದೆ ಸಮಾಜವಾದಿ ಪಕ್ಷದ ಕೈವಾಡವಿದೆ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಈ ಆರೋಪ ಮಾಡಿದ್ದಾರೆ ’ ಎಂದು ವರ್ಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.