ADVERTISEMENT

ಅಭಿವೃದ್ಧಿ ಜತೆ ಸ್ಥಿರತೆ ಗುರಿ :ವಿತ್ತ ಸಚಿವರ ದೃಢ ನಿಶ್ಚಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಅಭಿವೃದ್ಧಿ ಜತೆ ಸ್ಥಿರತೆಗೆ ಉತ್ತೇಜನ ನೀಡುವ ಗುರಿಯೊಂದಿಗೆ ಬಜೆಟ್ ರೂಪಿಸಲಾಗಿದ್ದು, ಆರ್ಥಿಕ ಬಲವರ್ಧನೆಯ ಹಾದಿಯಲ್ಲಿ ಸಾಗುವ ದೃಢ ನಿಶ್ಚಯ ಮಾಡಲಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಅಸ್ಥಿರತೆ ಕಾಣಿಸಿಕೊಳ್ಳುತ್ತಿರುವಾಗ ಬೆಲೆಗಳು ಮತ್ತು ಬೃಹತ್ ಆರ್ಥಿಕತೆಯ ವಲಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕಾಗಿದೆ. ಹಾಗಾಗಿ ಇದು ಅಭಿವೃದ್ಧಿ ಜತೆ ಸ್ಥಿರತೆಗೆ ಉತ್ತೇಜನ ನೀಡುವ ಬಜೆಟ್ ಎಂದು ಮುಖರ್ಜಿ ಪ್ರತಿಪಾದಿಸಿದರು.

ಪೂರೈಕೆಯ ಕೊರತೆ ನೀಗಲು ವಿಶೇಷವಾಗಿ ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಬಗೆಯ ಹೂಡಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಈ ಹೆಜ್ಜೆ ಹಣದುಬ್ಬರ ಎದುರಿಸಲು ಹಾಗೂ ಉನ್ನತ ಆರ್ಥಿಕ ಅಭಿವೃದ್ಧಿಯ ಪಥಕ್ಕೆ ಮರಳಲು ಸರ್ಕಾರಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆಯ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು.

ದೀದಿಯ ಬಂಡಾಯದ ಮಧ್ಯೆ ದಾದಾ ಮಂಡಿಸಿದ ಈ ಬಜೆಟ್ ಯುಪಿಎ ಸರ್ಕಾರದ ಬೀಳ್ಕೊಡುಗೆಗೆ ಕಾರಣವಾಗಲಿದೆ
ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಕ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.