ADVERTISEMENT

ಅರ್ಧ ಬೆಲೆಗೆ ಸಿಗಲಿದೆ ಸ್ಯಾನಿಟರಿ ಪ್ಯಾಡ್‌: ಚಂದ್ರಬಾಬು ನಾಯ್ಡು

ಏಜೆನ್ಸೀಸ್
Published 8 ಮಾರ್ಚ್ 2018, 11:25 IST
Last Updated 8 ಮಾರ್ಚ್ 2018, 11:25 IST
ಅರ್ಧ ಬೆಲೆಗೆ ಸಿಗಲಿದೆ ಸ್ಯಾನಿಟರಿ ಪ್ಯಾಡ್‌: ಚಂದ್ರಬಾಬು ನಾಯ್ಡು
ಅರ್ಧ ಬೆಲೆಗೆ ಸಿಗಲಿದೆ ಸ್ಯಾನಿಟರಿ ಪ್ಯಾಡ್‌: ಚಂದ್ರಬಾಬು ನಾಯ್ಡು   

ಅಮರಾವತಿ: ಶೀಘ್ರದಲ್ಲಿಯೇ ಸ್ಯಾನಿಟರಿ ಪ್ಯಾಡ್‌ಗಳು ಅರ್ಧ ಬೆಲೆಗೆ ಸಿಗಲಿವೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಗುರುವಾರ ಘೋಷಿಸಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನ ಸಂದರ್ಭದಲ್ಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಆರೋಗ್ಯ ಪರೀಕ್ಷೆಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿರುವುದಾಗಿ ಹೇಳಿದರು.

ಅಪೌಷ್ಠಿಕತೆ ನಿರ್ಮೂಲನೆ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಅರ್ಧ ಬೆಲೆಯಲ್ಲಿ ಸಿಗುವಂತೆ ಮಾಡಲು ಅಗತ್ಯ ನೀತಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.