ADVERTISEMENT

ಅಸ್ಸಾಂ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಏಜೆನ್ಸೀಸ್
Published 24 ಮಾರ್ಚ್ 2018, 13:26 IST
Last Updated 24 ಮಾರ್ಚ್ 2018, 13:26 IST
ಅಸ್ಸಾಂ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಅಸ್ಸಾಂ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು   

ಅಸ್ಸಾಂ: ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು  ದುಷ್ಕರ್ಮಿಗಳು ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ‌ ಎಸಗಿ ಜೀವಂತ ಸುಟ್ಟ ಅಮಾನವೀಯ ಘಟನೆ ಅಸ್ಸಾಮ್‌ನ ನಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದ್ದು, ಬಾಲಕಿ ಶನಿವಾರ ಕೊನೆಯುಸಿರೆಳೆದಿದ್ದಾಳೆ.

ಐವರು ಆರೋಪಿಗಳಲ್ಲಿ ಒಬ್ಬ ಜಾಕೀರ್ ಹುಸೇನ್ ಎಂದು ತಿಳಿದು ಬಂದಿದೆ. ಈ ಪೈಕಿ ಇಬ್ಬರು ಅಪ್ರಾಪ್ತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮೂವರು ಪರಾರಿಯಾಗಿದ್ದಾರೆ ದು ಪೊಲೀಸರು ತಿಳಿಸಿದ್ದಾರೆ.

ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಶಾಲೆಯಿಂದ ಮನೆಗೆ ಬಂದಿದ್ದಳು. ಒಬ್ಬಳೇ ಇರುವುದನ್ನು ಗಮನಿಸಿದ ಈ ಐವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಐವರಲ್ಲಿ ಮೂರನೇ ಆರೋಪಿಯನ್ನು ಸೆರೆಹಿಡಿಯಲು 7 ಬಾರಿ ಪ್ರಯತ್ನ ನಡೆಸಿದೆವು. ಆದರೆ ಆತ ಪರಾರಿಯಾಗಿದ್ದಾನೆ. ಬಾಲಕಿಯು ಮುಂಜಾನೆ ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.  ನಗಾಂವ್ ಜಿಲ್ಲೆಯ ಎಸ್‌ಪಿ ಶಂಕರ್‌ ರೈಮೇಧಿ ತಿಳಿಸಿದ್ದಾರೆ.

ಈ ಘಟನೆಯಿಂದ ಕುಪಿತಗೊಂಡ ಸ್ಥಳೀಯರು  ಆರೋಪಿ  ಜಾಕೀರ್ ಹುಸೇನ್ ಮನೆಯ ಮುಂದೆ ಪ್ರತಿಭಟನೆ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಬೇಕೆಂದು ಆಲ್ ಅಸ್ಸಾಂ ವಿದ್ಯಾರ್ಥಿ ಘಟಕ (ಎಎಎಸ್‌ಯು) ಆಗ್ರಹಿಸಿದೆ.

A minor girl was allegedly gang-raped and set on fire at Dhaniabheti Lalung Gaon in Nagaon district, police said today. Of the five accused, two juveniles are currently in police custody. The other three are absconding.

One Zakir Hussain and four others raped the Class-V girl when she was alone at home after returning from school last evening, they said. After committing the crime the rapists poured kerosene oil on her and set her ablaze.

"Following the girl's dying declaration, a police team nabbed the two juvenile accused. We have conducted seven raids to look for the third accused since Friday and have also managed to obtain a photograph of him," Nagaon Superintendent of Police Shankar Raimedhi told IndianExpress.com. The SP added the girl knew the accused since they lived in the same village.

The girl died this morning at the BP civil hospital here where she was admitted in a critical condition. The police were looking for Zakir Hussain and his associates. Angry locals attacked Zakir Hussain's house in protest, while students of the girl's school and the All Assam Students Union (AASU) demanded the arrest of the accused.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.