ADVERTISEMENT

ಆಟೊದಲ್ಲಿ ಸಂಚರಿಸುತ್ತಿದ್ದ ವೇಳೆ ಮಗುವನ್ನು ಹೊರಗೆಸೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಏಜೆನ್ಸೀಸ್
Published 6 ಜೂನ್ 2017, 7:54 IST
Last Updated 6 ಜೂನ್ 2017, 7:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಆಟೊದಲ್ಲಿ ಸಂಚರಿಸುತ್ತಿದ್ದ ವೇಳೆ 9 ತಿಂಗಳ ಮಗುವನ್ನು ಹೊರಗೆಸೆದು ಮೂವರು ದುಷ್ಕರ್ಮಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು 23ರ ಹರೆಯದ ಮಹಿಳೆಯೊಬ್ಬರು ದೂರಿದ್ದಾರೆ.

ಮೇ 29ರಂದು ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ.

ಐಎಂಟಿ ಮನೇಸರ್ ಬಳಿಯ ಬಾಸ್ಸ್ ಕುಲ್ಸಾ ನಿವಾಸಿಯಾದ ಮಹಿಳೆ ಮೇ. 29ರಂದು ಮಧ್ಯರಾತ್ರಿ ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ದೆಹಲಿ- ಗುರುಗ್ರಾಮ ಎಕ್ಸ್ ಪ್ರೆಸ್ ವೇ ಬಳಿ ಅತ್ಯಾಚಾರ ನಡೆದಿತ್ತು.

ADVERTISEMENT

ಮಹಿಳೆ ನೀಡಿದ ದೂರಿನಲ್ಲೇನಿದೆ?
ಮೇ 29ರಂದು ರಾತ್ರಿ ತನ್ನ ಗಂಡನೊಂದಿಗೆ ಜಗಳ ಮಾಡಿ ಖಂಡ್ಸಾ ರಸ್ತೆಯಲ್ಲಿರುವ ತವರು ಮನೆಗೆ ಹೊರಟಿದ್ದೆ, ನನ್ನ ಜತೆಗೆ 6 ತಿಂಗಳು ಹೆಣ್ಣು ಮಗು ಇತ್ತು, ನನಗೆ ಲಿಫ್ಟ್ ಕೊಡುವುದಾಗಿ ಹೇಳಿದ ಆಟೊದಲ್ಲಿ ಮೂವರು ಗಂಡಸರಿದ್ದರು. ನಾನು ಆಟೊ ಏರಿದೆ. ಸ್ವಲ್ಪ ಹೊತ್ತಾದ ನಂತರ ಅದರಲ್ಲಿದ್ದ ಗಂಡಸರು ನನಗೆ ಕಿರುಕುಳ ನೀಡಲು ತೊಡಗಿದರು. ನಾನು ಅದನ್ನು ಪ್ರತಿಭಟಿಸಿದಾಗ ಒಬ್ಬ ನನ್ನ ಮಗಳನ್ನು ಆಟೊದಿಂದ ಹೊರಗೆಸದ. ಆಮೇಲೆ ಆ ಮೂರು ಜನ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು, ನನ್ನ ಮಗು ಬದುಕಿ ಉಳಿಯಲಿಲ್ಲ ಎಂದು ಯುವತಿ ದೂರು ನೀಡಿದ್ದಾರೆ.

ಈ ಹಿಂದೆ ಮಹಿಳೆ ನೀಡಿದ ದೂರಿನನ್ವಯ ಕೊಲೆ, ಕಿರುಕುಳ ಮತ್ತು  ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ, ಆದರೆ ಆ ಮಹಿಳೆ ವೈದ್ಯಕೀಯ ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾರೆ. ಇದೀಗ ಅವರು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.